ನ್ಯಾಯಕ್ಕಾಗಿ ಬಲಿಷ್ಠ ಹೋರಾಟ ಅಗತ್ಯ

13 MANJU 01
Published on

ಹೊಸಪೇಟೆ: ಸ್ವಾತಂತ್ರ‍್ಯ ಬಂದು ಅಮೃತ ಮಹೋತ್ಸವ ಕೂಡ ಆಚರಣೆ ಮಾಡಿದ್ದೆವೆ. ಆದರೂ, ಇನ್ನೂ ಜಾತಿ ವ್ಯವಸ್ಥೆ ಇನ್ನು ನಿರ್ಮೂಲನೆ ಆಗಿಲ್ಲ ಎಂದು ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ನಗರದ ಬಳ್ಳಾರಿ ರಸ್ತೆಯಲ್ಲಿ ಶ್ರೀ ಗಣಪತಿ ಮೂರ್ತಿ ಪ್ರತಿಷ್ಠಾಪನೆ, ಪುಣ್ಯಾನಂದ ಪುರಿ ಕಲ್ಯಾಣ ಮಂಟಪದ ಅಭಿವೃದ್ಧಿಗೆ ದೇಣಿಗೆ ನೀಡಿದವರಿಗೆ ಸನ್ಮಾನ, ತಾಲೂಕು ವಾಲ್ಮೀಕಿ ನಾಯಕ ಸಂಘದ ಪದಗ್ರಹಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಹುಟ್ಟು ಮತ್ತು ಸಾವಿನ ನಡುವೆ ಇರು ಜೀವನದಲ್ಲಿ ಹಲವು ಘಟನೆಗಳು ನಡೆಯುತ್ತವೆ. ಆದರೆ, ಮಾನವೀಯತೆಯಿಂದ ಬದುಕುವ ಜೀವನ ಮಾತ್ರ ಸಮರ್ಥಕ ಎಂದರು.

ನಮ್ಮನಾಳುವ ಸರ್ಕಾರಗಳು ಸಮುದಾಯಗಳ ಬೆಂಬಲ ಪಡೆದು, ನಂತರ ನಮ್ಮ ಹಿತಕಾಯುವುದು ಮರೆಯುತ್ತಾರೆ. ಅಂತಹ ಸರ್ಕಾರಕ್ಕೆ ಪಾಠ ಕಲಿಸಲು ಜಾಗೃತರಾಗಬೇಕು. ಮಹರ್ಷಿ ವಾಲ್ಮೀಕಿ ಜಾತ್ರೆ ಜಾಗೃತಿ ಮೂಡಿಸಲು ಜಾತ್ರೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ವಾಲ್ಮೀಕಿ ಸಮುದಾಯದವಲ್ಲದ ತಳವಾರು ಅಕ್ರಮವಾಗಿ ಎಸ್ಟಿ ಪ್ರಮಾಣ ಪಡೆಯುತ್ತಿದ್ದಾರೆ. ತಳವಾರ ಎಂಬ ಕಾರಣಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ನಾಯಕ ತಳವಾರರ ಸಂವಿಧಾನ ಹಕ್ಕಿಗಾಗಿ ನಾವು ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ ಎಂದರು.

ರಾಜ್ಯದಲ್ಲಿ ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣ ನಡೆದಿದೆ. ಸಮುದಾಯದ ವಿದ್ಯಾರ್ಥಿಗಳಿಗೆ, ಮಕ್ಕಳಿಗೆ ಹಾಗೂ ಯುವಕರು ನಿಗಮದ ಹಲವು ಯೋಜನೆಗಳು ಸಿಗದೆ ವಂಚಿತರಾಗಿದ್ದಾರೆ. ನ್ಯಾಯಕ್ಕಾಗಿ ನಡೆದ ಹೋರಾಟಕ್ಕೆ ಬಿಜೆಪಿ ಉತ್ತಮ ಬೆಂಬಲ ಸಿಕ್ಕಿತು. ಆದರೆ, ಮುಡಾ ಹಗರಣ ಬಯಲಿಗೆ ಎಳೆದು ವಾಲ್ಮೀಕಿ ಹಗರಣ ಮುಚ್ಚಲಾಯಿತು. ರಾಜ್ಯದಲ್ಲಿ 14 ಜನ ಶಾಸಕರು, ಅದರಲ್ಲಿ ಇಬ್ಬರು ಸಚಿವರು ಇದ್ದರೂ ಪ್ರಯೋಜನವಿಲ್ಲ. ನಮ್ಮ ನ್ಯಾಯಕ್ಕಾಗಿ ಬಲಿಷ್ಠವಾಗಿ ಹೋರಾಟ ಮಾಡುವ ಅಗತ್ಯವಿದೆ ಎಂದರು.

ನೂತನ ಪದಾಧಿಕಾರಿಗಳು

ಅಧ್ಯಕ್ಷರಾಗಿ ಗುಜ್ಜಲ ಶ್ರೀನಾಥ, ಉಪಾಧ್ಯಕ್ಷರಾಗಿ ಕಿನ್ನಾಳ ಹನುಂಮತ, ಪ್ರಧಾನ ಕಾರ್ಯದರ್ಶಿಯಾಗಿ ದೇವರಮನೆ ಶ್ರೀನಿವಾಸ್, ಸಹ ಕಾರ್ಯದರ್ಶಿಯಾಗಿ ಗುಡಿ ಸೋಮನಾಥ, ಖಜಾಂಚಿಯಾಗಿ ಬೆಳಗೋಡು ಅಂಬಣ್ಣ, ನಿರ್ದೇಶಕರಾಗಿ ಗೋಸಲ ಭರಮಪ್ಪ, ಜಂಬಾನಹಳ್ಳಿ ವಸಂತ, ಕಣ್ಣಿ ಶ್ರೀಕಂಠ, ಎಸ್.ಎಸ್.ಚಂದ್ರಶೇಖರ, ಸಿಂದಿಗೇರಿ ದೇವೆಂದ್ರಪ್ಪ, ತಾರಿಹಳ್ಳಿ ವೆಂಕಟೇಶ, ಗುಜ್ಜಲ ಚಂದ್ರಶೇಖರ, ಗುಡಿಗಂಟಿನ ಮಲ್ಲಿಕಾರ್ಜುನ, ಕಟಿಗಿ ಜಂಬಯ್ಯ ನಾಯಕ, ನಿರ್ಲೀಗಿ ಕರೆಹನುಂತ ಅಧಿಕಾರ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net