

ಹೊಸಪೇಟೆ: ಯೂರಿಯಾ ಗೊಬ್ಬರ ಸಮರ್ಪಕವಾಗಿ ಪೂರೈಕೆ ಹಾಗೂ ಇತರೆ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘಟನೆಯಿದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಈ ದೇಶದ ಬೆನ್ನೆಲುಬು ರೈತರು ಎಂದು ಭಾಷಣಗಳಲ್ಲಿ ಬೊಬ್ಬೆ ಹೊಡೆಯುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂಗಾರು ಬಿತ್ತನೆಗೆ ರೈತರಿಗೆ ಯೂರಿಯಾ ಗೊಬ್ಬರ ಶೇ.50 ಸಬ್ಸಿಡಿ ನೀಡದೆ, ಕಾಳಸಂತೆಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ರೈತಾಪಿ ವರ್ಗದವರ ಜಮೀನುಗಳನ್ನು ಕಸಿದು ಕಾರ್ಪೋರೇಟ್ ಕಂಪನಿಗಳಿಗೆ ಕೊಡುವ ಹುನ್ನಾರಕ್ಕೆ ಮುಂದಾಗಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಕುಳಿತುಕೊಳ್ಳುವ ಬದಲಾಗಿ ಗೊಬ್ಬರ ಮಾರಾಟಗಾರರ ಅಕ್ರಮ ದಾಸ್ತಾನುಗಳ ಸ್ಟಾಕ್ ಯಾರ್ಡ್ಗಳ ಮೇಲೆ ಪರಿಶೀಲನೆ ನಡೆಸಿ, ಯೂರಿಯಾ ಅಭಾವವಾಗದಂತೆ ಕ್ರಮವಹಿಸಬೇಕು. ಕೇಂದ್ರ ಸರ್ಕಾರದ ನೀತಿಗಳನ್ನೇ ಅನುಸರಿಸುವ ಮೃದುಧೋರಣೆಯನ್ನು ಕೈಬಿಟ್ಟು ರೈತರ ಸಹಾಯಕ್ಕೆ ಬರಬೇಕು. ಈಗಾಗಲೇ ರೈತರು ಬೀಜ ಮತ್ತು ಗೊಬ್ಬರ, ಬಿತ್ತನೆಗೆ ಸಾವಿರಾರು ರೂಪಾಯಿಗಳನ್ನು ಕೈಸಾಲ ಮಾಡಿ ಆತಂಕಕ್ಕೆ ಒಳಗಾಗಿದ್ದಾರೆ. ಇದನ್ನು ತಡೆಯಲು ಸರ್ಕಾರ ಬೇಡಿಕೆಗೆ ಅನುಗುಣವಾಗಿ ಯೂರಿಯಾ ಗೊಬ್ಬರ ನೀಡಬೇಕು ಎಂಧು ಒತ್ತಾಯಿಸಿದರು.
ತುಂಗಭದ್ರಾ ಜಲಾಶಯದ ಕ್ರಸ್ಟ ಗೇಟ್ ಅಳವಡಿಕೆ ಗುಣಮಟ್ಟ ಕಾಪಡಬೇಕು. ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಜಮೀನುಗಳಿಗೆ ಕಿಲೋಮೀಟರ್ ಅಂತರ ನೋಡದೇ ಭೂಹೀನಾ ಬಡರೈತರಿಗೆ ಪಟ್ಟಾ ನೀಡಬೇಕು. ಸರ್ಕಾರ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ವಿಳಂಬ ಧೋರಣೆ ಖಂಡಿಸಿ ಶಾಸಕರು ರೈತರಿಗಾಗಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು. ಹಲವು ವರ್ಷಗಳಿಂದ ಜಂಬುನಾಥಹಳ್ಹಿ, ಸಂಕ್ಲಾಪುರ, ಇಂಗಳಗಿ, ರಾಜಾಪುರ ಮತ್ತು ಕಲ್ಲಹಳ್ಳಿ ಗ್ರಾಮಗಳಲ್ಲಿ ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿ, ಅರಣ್ಯ ಭೂಮಿ, ಹಾಗೂ ಇನಾಂ ಭೂಮಿಗಳಿಗೆ ರೈತರು ಸಲ್ಲಿಸಿದ ಫಾರಂ 57, ಮತ್ತು ಫಾರಂ 1 ಅರ್ಜಿಗಳನ್ನು ಇತ್ಯರ್ಥ ಪಡಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ರೈತರಾದ ಎನ್.ಯಲ್ಲಲಿಂಗ, ಕರಿಹನುಮಂತ, ಬಾಣದ ರಾಮಣ್ಣ, ಕಣ್ಣಿಮೆಪ್ಪ, ದುರುಗೇಶ್ ಇತರರಿದ್ದರು.