ಸಣ್ಣ ವ್ಯಾಪಾರಸ್ಥರ ಹಿತರಕ್ಷಣೆಗೆ ಸಹಾಯವಾಣಿ

24 MANJU 03
Published on

ಹೋಸಪೇಟೆ: ಬಿದಿ, ಸಣ್ಣ ವ್ಯಾಪಾರಸ್ಥರು ನಡೆಸುವ ಯುಪಿಐ ಆನ್ ಲೈನ್ ಪೇಮೆಂಟಗಳ ಬಗ್ಗೆ ರಾಜ್ಯದಲ್ಲಿ ತಲೆದೂರಿರುವ ತೆರಿಗೆ ಇಲಾಖಾ ನೋಟಿಸ್‌ಗಳಿಂದ ಇವರ ಹಿತರಕ್ಷಣೆಗಾಗಿ ಬಿಜೆಪಿ ವತಿಯಿಂದ ಸಹಾಯವಾಣಿ ಕೇಂದ್ರ ತೆರಯಲಾಗಿ ಎಂದು ಬಿಜೆಪಿ ಜಿಲ್ಲಾ ಯುವ ಘಟಕ ಅಧ್ಯಕ್ಷ ಕಿಚಿಡಿ ಕೊಟ್ರೇಶ್ ಪತ್ರಿಕಾ ಪ್ರಕಟಣೆಯ ತಿಳಿಸಿದ್ದಾರೆ.

ತೊಂದರೆಗೆ ಒಳಗಾದ ವ್ಯಾಪಾರಸ್ಥರು, ಹಾಗೂ ನೋಟಿಸ್ ಬಗ್ಗೆ ಪರಿಹಾರಕ್ಕಾಗಿ ಸಹಾಯವಾಣಿ 8884245123 ಕಾಲ್ ಮಾಡಿ ತಮ್ಮ ಸಮಸ್ಯೆಗಳನ್ನು ಪರಿಹರಿಸಕೊಳ್ಳಬಹುದು. ಸಹಾಯವಾಣಿ ಜು.21 ರಿಂದ ಪ್ರಾರಂಭವಾಗಿದೆ. ಬೀದಿಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳಿಗೆ ಈಗಾಗಲೇ ನೋಟಿಸ್‌ಗಳನ್ನು ರಾಜ್ಯ ಸರ್ಕಾರದ ಮೂಲಕ ನೀಡಲಾಗಿದೆ. ಈ ವಿಚಾರದಲ್ಲಿ ದೊಡ್ಡ ಗೊಂದಲ ಶುರುವಾಗಿದ್ದು, ಬಡ ವ್ಯಾಪಾರಿಗಳಲ್ಲಿ ಆತಂಕದ ಛಾಯೆ ಮೂಡಿದೆ. ಇದರ ಪರಿಹಾರೋಪಾಯಗಳನ್ನು ಕಾಂಗ್ರೆಸ್ ಸರ್ಕಾರ ಮಾಡಬೇಕಿತ್ತು.

ಕೇಂದ್ರ ಸರ್ಕಾರದ ನೀತಿಯ ಪ್ರಕಾರವೇ ವಾರ್ಷಿಕ ವಹಿವಾಟು 1.50 ಕೋಟಿ ಮೀರಿದರೆ ಅವರು ಶೇ.1 ವರೆಗೆ ಜಿಎಸ್‌ಟಿ ಪಾವತಿಸಬೇಕು. ಬೀದಿಬದಿ ವ್ಯಾಪಾರಿಗಳು ಎಂದರೆ ಅವರಿಗೆ ಶಾಶ್ವತ ಸ್ಥಳವಿರುವ ಅಂಗಡಿ ಮತ್ತು ವಿಳಾಸ ಇದ್ದರೆ ಅವರಿಗೆ ಜಿಎಸ್‌ಟಿ ತೆರಿಗೆ ಸಂಗ್ರಹಿಸಲು ನೋಟಿಸ್ ಕೊಡಬಹುದು. ವಾರ್ಷಿಕ ವಹಿವಾಟು 40 ಲಕ್ಷದವರೆಗೆ ವಿನಾಯಿತಿ ಇದೆ. ವಾರ್ಷಿಕ ವಹಿವಾಟು 20 ಲಕ್ಷ ಮೀರಿದ ವ್ಯಾಪಾರಿಗಳಿಗೆ ನೋಟಿಸ್ ಕೊಟ್ಟು ರಾಜ್ಯ ಸರ್ಕಾರ ಗೊಂದಲ ಸೃಷ್ಟಿಸಿದೆ. ಈ 90 ರಷ್ಟು ವರ್ತಕರಿಗೆ ರಾಜ್ಯ ಜಿಎಸ್‌ಟಿ ಘಟಕದ ವತಿಯಿಂದ ಯಾವುದೇ ಜಾಹಿರಾತು ಮಾಹಿತಿ ನೀಡದೆ ಮತ್ತು ತೆರಿಗೆ ಮಾಹಿತಿಯನ್ನು ಕೊಡದೆ ಸಣ್ಣ ವ್ಯಾಪಾರಿಗಳಲ್ಲಿ ಆತಂಕ ಸೃಷ್ಟಿಸಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರದ ಅಧಿಕಾರಿಗಳು ರಾಜ್ಯ ಸರ್ಕಾರ ವ್ಯಾಪಾರಿಗಳಿಗೆ ನೀಡಿರುವ 14000 ನೋಟಿಸ್ ಕಾನೂನಿಗೆ ವಿರುದ್ಧವಾಗಿದೆ ಮತ್ತು ಸಂವಿಧಾನ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net