

ಹೊಸಪೇಟೆ: ಸೌಜನ್ಯಳ ಸೇರಿದಂತೆ ರಾಜ್ಯದಲ್ಲಿನ ಅಸಹಜ ಸಾವುಗಳು ತನಿಖೆಯಾಗಲಿ ಎಂದು ಎಸ್‌ಎಫ್‌ಐ ಹಾಗೂ ಡಿವೈಎಫ್‌ಐ ಸಂಘಟನೆಯಿAದ ತಹಸೀಲ್ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಯಿತು.
11 ವರ್ಷದ ಹಿಂದೆ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಸಂಬAಧಿಸಿದAತೆ ಅಮಾಯಕ ಸಂತೋಷ ಎಂಬ ವ್ಯಕ್ತಿಯನ್ನು ಬಂಧಿಸಿದ್ದರು. ಆದರೆ ಕಳೆದ ವರ್ಷದಲ್ಲಿ ಸಂತೋಷ ಎಂಬ ವ್ಯಕ್ತಿಯು ಯಾವದೇ ತಪ್ಪಿನ ಪುರಾವೆ ಇಲ್ಲದೆ ಕೇಸ್ ಖುಲಾಸೆಯಾಗಿದೆ. ಆದರೆ, ನಿಜವಾದ ಆರೋಪಿ ಯಾರು ಎಂದು ಇದವರಿಗೂ ಪತ್ತೆ ಹಚ್ಚದೆ ಇರುವುದು ನಾಚಿಗೇಡಿನ ಸಂಗತಿ. ಆಡಳಿತ ಸರ್ಕಾರವು ಈಗಲಾದರೂ ಎಚ್ಚೆತ್ತುಕೊಂಡು ಕೂಡಲೆ ಸೌಜನ್ಯಗೆ ನ್ಯಾಯ ಒದಗಿಸಿಕೊಡಬೇಕು. ಹಾಗೂ ಪದ್ಮಲತಾ, ವೇದಾವತಿ, ಹಾಗೂ ಯಾದಗಿರಿಯಲ್ಲಿ ಪೇಪರ್ ಆಯವಂತ ಇಬ್ಬರು ಬಾಲಕಿಯರು ಸೇರಿದಂತೆ ರಾಜ್ಯದ ಅಸಹಜ ಸಾವುಗಳ ಪ್ರಕಾರಣಕ್ಕೆ ಕೂಡಲೆ ತನೆಖೆಗೆ ಒಳಪಡಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಯೂಟಬರ್ ಸಮೀರ್ ಅವರಿಗೆ ಬೆದರಿಕೆ ಕರೆಗಳು ನಿಲ್ಲಬೇಕು. ಬೆದರಿಕೆ ಹಾಕಿದವರುನ್ನು ಕೂಡಲೆ ಬಂಧಿಸಿಬೇಕು. ಸೌಜನ್ಯ ನ್ಯಾಯಕ್ಕಾಗಿ ಯಾರೆಲ್ಲ ಹೋರಾಟ ಮಾಡುತ್ತಿದ್ದಾರೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತುವರಿಗೆಲ್ಲ ಸರ್ಕಾರವು ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಡಿವೈಎಫ್‌ಐನ ಅಧ್ಯಕ್ಷ ವಿ.ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಡಿಗರ ಮಂಜುನಾಥ, ಎಸ್‌ಎಫ್‌ಐ ಕಾರ್ಯದರ್ಶಿ ಶಿವಾ ರೆಡ್ಡಿ, ಪ್ರಮುಖರಾದ ಪವನ್, ಅಲ್ತಾಫ್, ಸುಧಾಕರ್, ಎಸ್, ಮಂಜುನಾಥ್ ಇತರರಿದ್ದರು.