ಲಿಂಗ ಸಮಾನತೆ ನಮ್ಮ ಹೊಣೆ

06 MANJU 03
Published on

ಹೊಸಪೇಟೆ: ಲಿಂಗ ಸಮಾನ ಜಗತ್ತನ್ನು ನಿರ್ಮಿಸುವ ಮಹಿಳೆಯರ ಜೊತೆಗೆ ಹೆಜ್ಜೆ ಹಾಕಲು ಪುರುಷರ ಬೆಂಬಲ ಅಗತ್ಯವಿದೆ ಎಂದು ಯುಕೆ ಬಾರ್ಲಿಯಾನ್ ವಿವಿಯ ಪ್ರಾಧ್ಯಾಪಕಿ ಪ್ರೊ.ರೋನಿತ್ ಕಾರ್ಕ ತಿಳಿಸಿದರು.

ಕನ್ನಡ ವಿವಿಯ ಮಹಿಳಾ ಅಧ್ಯಯನ ವಿಭಾಗದಿಂದ ಪಂಪ ಸಭಾಂಗಣದಲ್ಲಿ ಬುಧವಾರ ಅಂತರಾಷ್ಟಿçÃಯ ಮಹಿಳಾ ದಿನಾಚರಣೆಯ ನಿಮಿತ್ತ ಕೂಡಿ ಕಲಿಯುವುದು : ಸಂಘಟನೆ/ ಸಂಸ್ಥೆಗಳಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸುವುದರಲ್ಲಿ ಪುರುಷರ ಸಹಭಾಗಿತ್ವ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

ನಾವೆಲ್ಲರೂ ಸಮಸ್ಯೆಯ ಭಾಗವಾಗಿದ್ದೇವೆ ಅದನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು. ಪ್ರಮುಖವಾಗಿ ಸ್ತಿçÃಲಿಂಗ ವಿಷಯಗಳಿಗೆ ಸಂಬAಧಿಸಿದ ಕ್ರಿಯಾಶೀಲತೆಯ ನಿರ್ದಿಷ್ಟ ಕ್ಷೇತ್ರಗಳಿವೆ, ಈ ಕ್ಷೇತ್ರಗಳಲ್ಲಿ ಅವರ ಸೀಮಿತ ಜ್ಞಾನ ಮತ್ತು ಅನುಭವದಿಂದಾಗಿ ಪುರುಷರು ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇನ್ನೂ ಒಂದು ಹೆಣ್ಣಿಗೆ ಮನೆಯಲ್ಲಿ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹ ಸಿಕ್ಕರು ಹೊರಗಡೆ ಪ್ರೋತ್ಸಾಹ ಸಿಗುವುದು ಕಡಿಮೆ. ಅನಾದಿಕಾಲದಿಂದಲೂ ಹೆಣ್ಣಿಗೆ ಗಂಡಿನ ಜೊತೆ ಬದುಕುವುದು ಅನಿವಾರ್ಯವಾಗಿದೆ. ಅವಳನ್ನು ಪ್ರೋತ್ಸಾಹ ಮಾಡುವ ನೆಪದಲ್ಲಿ ನೀನು ಏನೇ ಮಾಡು ನಾವು ಹಿಂದೆ ಇರುತ್ತೇವೆ. ಮಹಿಳೆಯ ಜೀವನ ಹಾವು ಏಣಿಯ ಆಟದ ರೀತಿಯಲ್ಲಿ ಆಗಿದ್ದು ಮನೆಯಲ್ಲಿ ಹೆಣ್ಣು ಗಂಡು ಭೇದಭಾವವಿಲ್ಲದೆ ಮಕ್ಕಳನ್ನು ಬೆಳೆಸುವುದರ ಮೂಲಕ ಸಮಾನತೆಗೆ ಬುನಾದಿ ಹಾಕಬೇಕು ಎಂದರು.

ಕನ್ನಡ ವಿವಿಯ ಕುಲಸಚಿವ ಪ್ರೊ.ವಿಜಯ್ ಪೂಣಚ್ಚ ತಂಬAಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ಹೊಸ ಬಗೆಯ ಆಯಾಮಗಳಲ್ಲಿ ಚರ್ಚೆಯಾಗಬೇಕಾಗಿದ್ದು, ನಾವು ನಮ್ಮಲ್ಲಿ ಭಾವನಾತ್ಮಕವಾಗಿ ತುಂಬಾ ರೋಚಕವಾಗಿ ಮಹಿಳೆಯರನ್ನು ನೋಡದೆ ಸಮಾನ ದೃಷ್ಟಿಯಲ್ಲಿ ಕಾಣಬೇಕು ಎಂದರು.

ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಶೈಲಜ ಇಂ.ಹಿರೇಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net