ನಿರಂತರ ಪ್ರಯತ್ನ ಯಶಸ್ಸಿನ ಶಿಖರ

08 MANJU 03
Published on

ಹೊಸಪೇಟೆ: ಸಾಧನೆ ಎನ್ನುವುದು ಸಾಧಿಸುವವರ ಸ್ವತ್ತೇ ಹೊರತು, ಸೋಮಾರಿಗಳದ್ದಲ್ಲ ಎಂದು ಎಸ್ಪಿ ಡಾ.ಶ್ರೀಹರಿಬಾಬು ಹೇಳಿದರು.

ಕನ್ನಡ ವಿವಿಯ ಪಂಪ ಸಭಾಂಗಣದಲ್ಲಿ ಆಯೋಜಿಸಿದ 21 ದಿನಗಳ ಕಾಲ ಯುಜಿಸಿ ನೆಟ್ ಹಾಗೂ ಕೆ-ಸೆಟ್ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸಮಯ ಎಂಬುದು ತುಂಬಾ ಅಮೂಲ್ಯವಾದುದು. ಪ್ರತಿದಿನವೂ ಆಸಕ್ತಿಯಿಂದ ಅಭ್ಯಾಸ ಮಾಡಬೇಕು. ಪ್ರಯತ್ನ, ಪರಿಶ್ರಮ ಮತ್ತು ಏಕಾಗ್ರತೆ ಇವೇ ಯಶಸ್ಸಿನ ಗುಟ್ಟು ಎಂಬುದನ್ನು ವಿದ್ಯಾರ್ಥಿಗಳು ಮರೆಯ ಬಾರದು. ಜೀವನದಲ್ಲಿ ವಿಫಲತೆ ಎಂದರೆ ಅದು ಕೇವಲ ಒಂದು ಸೋಲು ಅಲ್ಲ, ಬದಲಾಗಿ ಅದು ಜೀವನದ ಒಂದು ದೊಡ್ಡ ಭಾಗ. ಈ ಸೋಲನ್ನು ಸರಿಯಾದ ರೀತಿಯಲ್ಲಿ ಅರಿತುಕೊಂಡು ನಿರಂತರ ಪ್ರಯತ್ನದಿಂದ ಯಶಸ್ಸಿನ ಶಿಖರ ಏರಬಹುದು. ಮುಖ್ಯವಾಗಿ ಸಕಾರಾತ್ಮಕ ಮನೋಭಾವದಿಂದ ಜೀವಕ್ಕೆ ಬೇಕಾದ ಕೌಶಲ ಮತ್ತು ತಾಳ್ಮೆ ಒಗ್ಗೂಡಿಸಿಕೊಂಡರೆ ಯಶಸ್ಸಿನ ಹಾದಿ ಸುಲಭವಾಗುತ್ತದೆ. ಇನ್ನೂ ಇಂದಿನ ದಿನಗಳಲ್ಲಿ ಸಾಕಷ್ಟು ಸೌಲಭ್ಯಗಳಿದ್ದರೂ ಇಚ್ಛಾಶಕ್ತಿ ಕೊರತೆಯಿದ್ದು ಆ ದಿಸೆಯಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸು ಸಾಧಿಸಲು ಶ್ರದ್ಧೆ, ಆಸಕ್ತಿ, ತಾಳ್ಮೆ, ಪರಿಶ್ರಮ ಹಾಗೂ ಸತತವಾದ ಪ್ರಯತ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ವೆಂಕಟಗಿರಿ ದಳವಾಯಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net