ಅನುವಾದಕ್ಕೆ ಅವಸರ ಸಲ್ಲದು

01 MANJU 16
Published on

ಹೊಸಪೇಟೆ: ಭಾಷೆಯ ಮಹತ್ವ ತಿಳಿದು, ಸಾಹಿತ್ಯವನ್ನು ತಿದ್ದಿ ಭಾಷೆಯನ್ನು ಅನುವಾದಿಸಬೇಕು. ಅವಸರದಿಂದ ಅನುವಾದವು ಮೂಲ ಸಾಹಿತ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಗಂಗಾವತಿಯ ಎಸ್.ಕೆ.ಎನ್.ಜಿ. ಕಾಲೇಜಿನ ಪ್ರಾಧ್ಯಾಪಕ ಡಾ.ಜಾಜಿ ದೇವೇಂದ್ರಪ್ಪ ಅಭಿಪ್ರಾಯಪಟ್ಟರು.

ಅಂತರಾಷ್ಟಿçÃಯ ಭಾಷಾಂತರ ದಿನಾಚರಣೆಯ ನಿಮಿತ್ತ ಕನ್ನಡ ವಿವಿಯ ಭಾಷಾಂತರ ಅಧ್ಯಯನ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಸಹಯೋಗದಿಂದ ಭಾಷಾಂತರ ಕಲೆ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಯಾವುದೇ ವ್ಯಕ್ತಿ ಭಾಷೆ ಜ್ಞಾನ ಇದ್ದ ಕೂಡಲೇ ಅನುವಾದಕರಾಗಲು ಸಾಧ್ಯವಿಲ್ಲ. ಬಹುತ್ವ ಭಾರತದಲ್ಲಿ ಅನುವಾದ ಎನ್ನುವುದು ಭಿನ್ನ ಮಾದರಿಯಾಗಿದ್ದು, ಪ್ರಾದೇಶಿಕ ಭಾಷೆಗಳು ತುಂಬಾ ಕಠಿಣವಾಗಿವೆ. ಇತ್ತಿಚಿನ ದಿನಗಳಲ್ಲಿ ಹಲವಾರು ಜನ ಯಥಾವತ್ತಾಗಿ ಸಿದ್ದಾಂತಗಳನ್ನು ಓದಿ ಅನುವಾದವನ್ನು ಮಾಡುತ್ತಾರೆ. ಸಿದ್ಧಾಂತಗಳೇ ಬೇರೆ ಪ್ರಾಯೋಗಿಕವೇ ಬೇರೆಯಾಗಿದೆ. ಇನ್ನೂ ಭಾಷಾಂತರದ ಮೂಲಕವೇ ಹೊಸ ಲೋಕವನ್ನು ಸೃಷ್ಟಿ ಮಾಡಬೇಕು ಎಂದರು.

ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾಷೆ ಎಂಬುದು ಸಂಸ್ಕöÈತಿಯ ಪ್ರತೀಕ. ಭಾಷೆ ಮನುಷ್ಯನಿಗೆ ಪ್ರಕೃತಿ ಕೊಟ್ಟ ಕೊಡುಗೆಯಾಗಿದ್ದು, ಭಾಷೆಯಿಂದ ಸಂವಹನ ಸುಲಭವಾಗುತ್ತದೆ. ಏಕ ಭಾಷೆ ಸಂಸ್ಕöÈತಿಯಿAದ ಸ್ಥಳೀಯ ಸಂಸ್ಕöÈತಿ ನಾಶವಾಗುತ್ತದೆ. ಪ್ರಮುಖವಾಗಿ ಕವಿಗಳು ಮತ್ತು ವಚನಕಾರರು ಭಾಷೆಯನ್ನು ಜ್ಞಾನವನ್ನಾಗಿ ರೂಪಿಸಿಕೊಂಡಿದ್ದವರಾಗಿದ್ದರು ಹಾಗೆಯೇ ಬಿಎಂಶ್ರೀ ಅವರು ಭಾಷಾಂತರದ ಮಹತ್ವವನ್ನು ಕಂಡುಕೊAಡಿದ್ದರು. ಭಾಷೆಯೇ ನಮ್ಮ ಶಕ್ತಿಯಾಗಿದ್ದು, ಕನ್ನಡದ ಶ್ರೇಷ್ಠ ಗುಣವನ್ನು ಜಗತ್ತಿಗೆ ಪರಿಚಯಿಸೋಣ ಎಂದರು. ಭಾಷಾAತರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಎ.ಮೋಹನ್ ಕುಂಟಾರ್ ಪ್ರಾಸ್ತಾವಿಕ ಮಾತನಾಡಿದರು. ಐಕ್ಯೂಎಸಿ ಉಪನಿರ್ದೇಶಕ ಡಿ.ಪ್ರಭಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net