ಸಾವಿತ್ರಿಬಾಯಿ ಫುಲೆ ಮಹಿಳೆಯರಿಗೆ ಪ್ರೇರಣೆ

10 MANJU 06
Published on

ಹೊಸಪೇಟೆ: ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಶೋಷಿತರ, ಅಸಹಾಯಕರ, ಅಸ್ಪೃಶ್ಯ ಮಹಿಳೆಯರಿಗಾಗಿಯೇ ಶಿಕ್ಷಣ ಸಂಸ್ಥೆ ತೆರೆದು, ಆಧುನಿಕ ಶಿಕ್ಷಣದ ತಾಯಿ ಅಪರೂಪದ ಸೇವೆ ಮಾಡಿದರು ಎಂದು ಕನ್ನಡ ವಿವಿಯ ಅಧ್ಯಯನಾಂಗದ ನಿರ್ದೇಶಕ ಡಾ.ಅಮರೇಶ ಯತಗಲ್ ತಿಳಿಸಿದರು.

ಕನ್ನಡ ವಿವಿಯ ಸಂಗೀತ ಮತ್ತು ನೃತ್ಯ ವಿಭಾಗದಿಂದ ಮಂಗಳವಾರ ಪಂಪ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿನಿಯರಿಗೆ ಮಹಾತಾಯಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರು ಮಾದರಿಯಾಗಿದ್ದಾರೆ ಎಂದರು.

ಕುಲಪತಿ ಡಾ.ಡಿ.ವಿ ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರ ದಿನಾಚರಣೆಯ ನೆಪದಲ್ಲಿ ಇಂತಹ ಮಹಿಳಾ ಹೋರಾಟಗಾರ್ತಿ, ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಅವರ ಹಕ್ಕು ಬಾಧ್ಯತೆಗಳಿಗಾಗಿ ಹೋರಾಡಿದ ಸಾಧಕಿಯನ್ನು ಸ್ಮರಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ಬಹುದೊಡ್ಡ ಗೌರವ ಎಂದರು.

ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಮಾತನಾಡಿ, ಶಿಕ್ಷಣಕ್ರಾಂತಿ, ಬಾಲ್ಯವಿವಾಹ ತಡೆ, ವಿಧವಾ ಪುನರ್ವಿವಾಹ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ ಅಕ್ಷರದವ್ವ ವಿದ್ಯಾರ್ಥಿಗಳಿಗೆ ಸತ್ಪೆçÃರಣೆಯಾಗಿದ್ದಾರೆ ಎಂದರು.

ಎA.ಎ ಕನ್ನಡ ಸಾಹಿತ್ಯ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿ ತಿಪ್ಪೇಸ್ವಾಮಿ ನಾಯ್ಕ ರಚಿಸಿ ಅಭಿನಯಿಸಿದ ಪೇಪರ್ ನಾಟಕ ಪ್ರದರ್ಶನಗೊಂಡಿತು. ಡಾ.ವೀರೇಶ ಬಡಿಗೇರ ಅವರ ಮಾರ್ಗದರ್ಶನದಲ್ಲಿ ಎಂ.ಎ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಅಭಿನಯಿಸಿ ಸಾವೇ ಬದುಕಿನ ಕೊನೆಯಲ್ಲ ಬದುಕು ಬಹಳ ದೊಡ್ಡದು ಎನ್ನುವ ಸಂದೇಶವನ್ನು ಅಭಿನಯದ ಮೂಲಕ ಮನವರಿಕೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net