

ಹೊಸಪೇಟೆ: ಜೀವನದಲ್ಲಿ ಸಮಯಕ್ಕೆ ತುಂಬಾ ಮಹತ್ವವಿದೆ. ಎಲ್ಲರಿಗೂ ಸಮಾನವಾಗಿ ದೊರೆಯುವುದು ಸಮಯ. ವಿದ್ಯಾರ್ಥಿಗಳು ಸಮಯ ವ್ಯರ್ಥಮಾಡದೇ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಎಂದು ಕನ್ನಡ ವಿವಿಯ ಅಧ್ಯಯನಾಂಗ ನಿರ್ದೇಶಕ ಡಾ.ಅಮರೇಶ್ ಯತಗಲ್ ಹೇಳಿದರು.
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ವಿವಿಯ ನುಡಿ ಕಟ್ಟಡದಲ್ಲಿ ಗುರುವಾರ ಮೊದಲ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಸ್ವಯಂ ಅಧ್ಯಯನವನ್ನು ರೂಢಿಸಿಕೊಳ್ಳಬೇಕು. ಸಾಧನೆಗೆ ಗುರಿಯನ್ನು ಇಟ್ಟುಕೊಂಡು ತಾಳ್ಮೆಯಿಂದ ನಿರಂತರ ಪ್ರಯತ್ನ ಮಾಡಿದಾಗ ಯಶಸ್ಸು ನಮ್ಮದಾಗುತ್ತದೆ ಎಂದರು.
ಹಸ್ತಪ್ರತಿಶಾಸ್ತç ವಿಭಾಗದ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ ಮಾತನಾಡಿ, ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆ ಹೊರತರುವುದು. ಸೌಂದರ್ಯ ಪ್ರಜ್ಞೆ ಮತ್ತು ಕಲಾ ಪ್ರಜ್ಞೆ ಎಲ್ಲರಿಗೂ ಒಲಿಯುವಂತದಲ್ಲ. ಸಾಹಿತ್ಯ ಅಧ್ಯಯನ ನಕಾರಾತ್ಮಕ ಚಿಂತನೆಗಳನ್ನು ತೊಲಗಿಸಿ ಸಕರಾತ್ಮಕ ಚಿಂತನೆಗಳನ್ನು ರೂಪಿಸಿಕೊಳ್ಳಲು ಬೇಕು. ಸಾಹಿತ್ಯ ಭಾವನೆಗಳನ್ನು ಸಮೃದ್ಧಗೊಳಿಸುವಲ್ಲಿ ಪಾತ್ರ ವಹಿಸುತ್ತದೆ ಎಂದರು.
ವಿವಿಯ ಪ್ರಾಧ್ಯಾಪಕರಾದ ಡಾ.ಪಿ.ಮಹದೇವಯ್ಯ, ಡಾ.ಮಾಧವ ಪೆರಾಜೆ, ಡಾ.ವೆಂಕಟಗಿರಿ ದಳವಾಯಿ, ಡಾ.ಗೋವಿಂದ, ಡಾ.ಎಸ್.ಆರ್.ಚನ್ನವೀರಪ್ಪ, ಡಾ.ಶೈಲಜ ಇಂ.ಹಿರೇಮಠ, ಡಾ.ಈ.ರ‍್ರಿಸ್ವಾಮಿ ಇತರರಿದ್ದರು.