

ಹೊಸಪೇಟೆ: ಪ್ರತಿ ತಿಂಗಳು ವೇತನ ಕೊಡಿಸಿ ಎಂದು ಕನ್ನಡ ವಿವಿ ಅಥಿತಿ ಉಪನ್ಯಾಸರು ಹಾಗೂ ಹೊರಗುತ್ತಿಗೆ ನೌಕರರಿಂದ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್‌ಗೆ ಒತ್ತಾಯಿಸಿದರು.
ಮಂಗಳವಾರ ಕನ್ನಡ ವಿವಿಗೆ ಆಗಮಿಸಿದ ವೇಳೆ ಮನವಿ ಸಲ್ಲಿಸಿದ ಹೊರಗುತ್ತಿಗೆ ನೌಕರರು, ವಿವಿಯಲ್ಲಿ ಕಳೆದ 15ರಿಂದ 20 ವರ್ಷಗಳಿಂದ ದಿನಗೂಲಿಯಾಗಿ 47 ಕಾರ್ಮಿಕರು ಕೆಲಸ ಮಾಡುತ್ತಿದ್ದೇವೆ. ಅನಂತರ ಹೊರ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದೇವೆ. ಕನಿಷ್ಠ ಸಾಮಾಜಿಕ ರಕ್ಷಣೆ ಸೌಲಭ್ಯಗಳಿಲ್ಲದೇ ಸೇವೆ ಮಾಡುತ್ತಿದ್ದಾರೆ. ಇವರಲ್ಲಿ ಹಲವರು ವಿವಿಗೆ ಕಡಿಮೆ ಬೆಲೆಗೆ ಭೂಮಿಯನ್ನು ಬಿಟ್ಟುಕೊಟ್ಟಿದ್ದಾರೆ. ಈ ಎಲ್ಲಾ ಕೆಳ ವರ್ಗದವರು ಹಾಗೂ ಕಡುಬಡವರಾಗಿದ್ದಾರೆ. ವಿವಿಯ ರಕ್ಷಣಾ ಕಾರ್ಮಿಕರಾಗಿ, ಸ್ವಚ್ಛತಾ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇದನ್ನೇ ಇವರು ನಂಬಿಕೊAಡು ಜೀವನ ಸಾಗಿಸಿದ್ದೇವೆ ಎಂದು ಆಗ್ರಹಿಸಿದರು.
ವಿವಿಗೆ ರಾಜ್ಯ ಸರ್ಕಾರದಿಂದ ಅನುದಾನ ಸರಿಯಾಗಿ ಬರುತ್ತಿಲ್ಲವೆಂಬ ಕಾರಣದಿಂದ ನಮ್ಮನ್ನು ಉದ್ಯೋಗದಿಂದ ತೆಗೆದು ಹಾಕಿದರು. ನಂತರ ಸ್ಥಳೀಯರ ನಮ್ಮ ಮನವಿ, ಸಂಘಟನೆಗಳ ಹೋರಾಟದಿಂದ ಶಾಸಕ ಎಚ್.ಆರ್.ಗವಿಯಪ್ಪ ಕುಲಪತಿಗಳಿಗೆ ಮುಂದು ವರೆಸಲು ತಿಳಿಸಿದರು. ಆದರೆ, ಕಳೆದ 11 ತಿಂಗಳಿAದ ವೇತನ ಬಂದಿಲ್ಲ. ನಾವು ಉಳ್ಳವರಲ್ಲ, ಕನ್ನಡ ವಿವಿಯಿಂದ ಬರುವ ಸಂಬಳವೇ ನಮಗೆ ಆಧಾರ. 47 ಜನ ಕಾರ್ಮಿಕರ ಕುಟುಂಬದ ಭವಿಷ್ಯ ಅಡಗಿದೆ. ಸಂಬಳ ಮಾಡಿಸಿ ನಮ್ಮ ಕುಟುಂಬಕ್ಕೆ ಆಶ್ರಯ ನೀಡಿ ಎಂದು ಒತ್ತಾಯಿಸಿದರು.
ಸಿಂಡಿಕೇಟ್ ಸದಸ್ಯರಾದ ಬಂಜಗರ್ ಜಯಪ್ರಕಾಶ್, ಬಣ್ಣದಮನೆ ಸೋಮಶೇಖರ, ಪನ್ನಿರಾಜ್ ಇತರರಿದ್ದರು.