ಪ್ರವೃತ್ತಿಗೆ ನಿವೃತ್ತಿ ಎಂಬುದು ಇಲ್ಲ

farewell
ಕನ್ನಡ ವಿವಿಯ ಮಾನವಶಾಸ್ತç ವಿಭಾಗದಿಂದ ಹಿರಿಯ ಪ್ರಾಧ್ಯಾಪಕ ಡಾ.ಮಂಜುನಾಥ ಬೇವಿನಕಟ್ಟಿ ಅವರಿಗೆ ಮಂಗಳವಾರ ಬೀಳ್ಕೊಡುಗೆ ನೀಡಿದರು
Published on

ಹೊಸಪೇಟೆ: ಸರ್ಕಾರಿ ವೃತ್ತಿಗೆ ನಿವೃತ್ತಿ ಎನ್ನುವುದು ಸಹಜವಾದ ಪ್ರಕ್ರಿಯೆ, ಆದರೆ ನಮ್ಮಲ್ಲಿ ಇರುವ ಪ್ರವೃತ್ತಿಗೆ ನಿವೃತ್ತಿ ಎಂಬುದು ಇಲ್ಲವೆಂದು ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.

ಕನ್ನಡ ವಿವಿಯ ಮಾನವಶಾಸ್ತç ವಿಭಾಗದಿಂದ ಮಂಗಳವಾರ ಹಿರಿಯ ಪ್ರಾಧ್ಯಾಪಕ ಡಾ.ಮಂಜುನಾಥ ಬೇವಿನಕಟ್ಟಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಾ.ಮಂಜುನಾಥ ಬೇವಿನಕಟ್ಟಿಯವರು ಜನಪದ ತಜ್ಞರು, ವಿದ್ಯಾರ್ಥಿ ಸ್ನೇಹಿ, ನೇರ ನಿಷ್ಠುರವಾದಿ. ಅವರು ವೃತ್ತಿಗೆ ಮಾತ್ರ ನಿವೃತ್ತಿ ಪಡೆಯುತ್ತಿದ್ದಾರೆ. ಆದರೆ ಪ್ರವೃತ್ತಿಗೆ ನಿವೃತ್ತಿ ಎಂಬುದು ಇಲ್ಲ. ಮುಂದಿನ ದಿನಗಳಲ್ಲಿ ಜನಪದ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಲಿ, ನಿವೃತ್ತರಾದರೂ ಅವರಿಗೆ ವಿವಿ ಬಾಗಿಲು ತೆರದೆ ಇರುತ್ತದೆ. ಅವರ ಮುಂದಿನ ಜೀವನ ಆರೋಗ್ಯಕರವಾಗಿರಲಿ ಎಂದರು.

ಮಾನವಶಾಸ್ತç ವಿಭಾಗದ ಮುಖ್ಯಸ್ಥ ಡಾ.ತಾರಿಹಳ್ಳಿ ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ಮಂಜುನಾಥ ಬೇವಿನಕಟ್ಟಿ ಅವರು ನಿಯಮಗಳಿಗೆ ಬದ್ಧವಾಗಿದ್ದವರು. ಹಾಗೂ ಶಿಸ್ತುಪಾಲನೆಗೆ ಮೊದಲ ಪ್ರಾಶಸ್ತö್ಯ ನೀಡಿದವರು. ಇವರು ನಮ್ಮ ವಿವಿಯಲ್ಲಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ ಎಂದರು. ಮಾಹಿತಿಕೇAದ್ರದ ಉಪನಿರ್ದೇಶಕಿ ಡಾ.ಡಿ.ಮೀನಾಕ್ಷಿ, ಸಂಶೋಧನಾ ವಿದ್ಯಾರ್ಥಿ ವಿನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net