

ಹೊಸಪೇಟೆ : ಕನ್ನಡ ವಿವಿಯ ಸಮಾಜಶಾಸ್ತç ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಸಂಶೋಧನಾ ಬರವಣಿಗೆಯಲ್ಲಿ ಎಕ್ಸೆಲ್ ಮತ್ತು ವರ್ಡ್ ಬಳಕೆ ಕಾರ್ಯಕ್ರಮ ನಡೆಯಿತು.
ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಎಚ್.ಡಿ.ಪ್ರಶಾಂತ್ ಮಾತನಾಡಿ, ಕಲಿಯುವುದು ತುಂಬಾ ಇದೆ. ಅದಕ್ಕೆ ನಮ್ಮಿಂದ ತಾಳ್ಮೆ ಬೇಕು. ಎಕ್ಸೆಲ್ ಮತ್ತು ವರ್ಡ್ ಕಲಿಯುವುದಕ್ಕೆ ಒಳ್ಳೆಯ ಕಾರ್ಯಕ್ರಮವಾಗಿದೆ. ಈ ರೀತಿಯ ಕಾರ್ಯಕ್ರಮಗಳು ವಿವಿಯಲ್ಲಿ ಸದಾಕಾಲ ನಡೆಯಬೇಕು. ತಂತ್ರಜ್ಞಾನ ಯುಗದಲ್ಲಿ ಇವುಗಳ ಜತೆ ಹೊಂದಿಕೊAಡು ಬದುಕಬೇಕು. ಇದರಿಂದ ಕೌಶಲ್ಯ, ಜ್ಞಾನ ವೃದ್ಧಿಸುವುದರ ಜತೆಗೆ ನಿಮ್ಮ ಹಣವನ್ನು ಉಳಿಸಬಹುದು. ಯಾರ ಅವಲಂಬನೆ ಇಲ್ಲದೇನೆ ನಿಮ್ಮ ಸಂಶೋಧನೆಯನ್ನು ಪೂರ್ಣಗೊಳಿಸಬಹುದು. ಕಲಿಕೆ ಮುಕ್ತವಾದ ವೇದಿಕೆ ಇದೆ. ಕಲಿಯಲು ಸಮಯ ಕೊಡಬೇಕು ಅಷ್ಟೇ. ಅನೇಕ ಯುವಕರು ಇದರಿಂದ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ ಎಂದರು.
2ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ರ‍್ರಿಸ್ವಾಮಿ, ಸಂಶೋಧನಾ ವಿದ್ಯಾರ್ಥಿ ಜಿ.ಟಿ.ಮಂಜಣ್ಣ ಇದ್ದರು.