ಭಾರತದ ವಿವಿಧತೆಯನ್ನು ತಿಳಿಯಲು ಭಾಷಾಂತರ ಅಗತ್ಯ

07 MANJU 04
Published on

ಹೊಸಪೇಟೆ: ಹಲವಾರು ರಾಜ್ಯಗಳನ್ನು ಹೊಂದಿದ ಬಹುತ್ವ ಭಾರತದಲ್ಲಿ ಸಂಸ್ಕöÈತಿ, ಭಾಷೆ, ಆಚಾರ ವಿಚಾರ ಭಿನ್ನವಾಗಿವೆ ಅದನ್ನು ನಾವು ತಿಳಿಯಬೇಕಾದರೆ ಭಾಷಾಂತರವನ್ನು ಕಲಿಯಬೇಕು ಎಂದು ಕನ್ನಡ ವಿವಿಯ ಹಳೆಯ ವಿದ್ಯಾರ್ಥಿ ಟಿ.ಎಚ್.ಬಸವರಾಜ ತಿಳಿಸಿದರು.

ಕನ್ನಡ ವಿವಿಯ ನುಡಿ ಕಟ್ಟಡದಲ್ಲಿ ಭಾಷಾಂತರ ಕೇಂದ್ರ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಭಾಷಾಂತರ ಅಧ್ಯಯನ ವಿಭಾಗ ಅಲುಮ್ನಿ ಸಹಯೋಗದಲ್ಲಿ ಮೂರು ದಿನಗಳ ಭಾಷಾಂತರ ತರಬೇತಿ ಕಮ್ಮಟ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅನುವಾದದಲ್ಲಿ ಮೂಲಕೃತಿಗೆ ಹಲವಾರು ಬಾರಿ ಧಕ್ಕೆ ಉಂಟಾಗುವ ಸಾಧ್ಯತೆಯಿದ್ದು, ಅದನ್ನು ಅರಿತುಕೊಳ್ಳಬೇಕು. ಇಂಗ್ಲೀಷ್ ಭಾಷೆಯಲ್ಲಿ ನಾವು ಒಮ್ಮೆಲೇ ಧುಮುಕುತ್ತಿದ್ದೇವೆ. ನಿಧಾನವಾಗಿ. ಸರಳವಾಗಿ ಅರ್ಥ ಮಾಡಿಕೊಂಡು ಕಲಿಯಬೇಕು. ಬೇರೆ ದೇಶಗಳಲ್ಲಿ ಒಂದೇ ರೀತಿಯ ಇಂಗ್ಲಿಷ್ ಮಾತನಾಡುವವರು ಸಿಗುವುದು ಕಷ್ಟ. ಅವರು ಮಾತನಾಡುವ ಶೈಲಿ ಭಿನ್ನವಾಗಿರುತ್ತದೆ. ಭಾಷೆಯು ಬಳಕೆಯಿಂದ ಬರುತ್ತದೆ ವಿನಹ ಓದಿದರೆ, ಬರೆದರೆ ಬರುವುದಿಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನಿವಾರ್ಯದ ತೂಗುಗತ್ತಿಯಾಗಿ ಇಂಗ್ಲಿಷ್ ನಿಂತಿದೆ ಎಂದರು.

ಕನ್ನಡ ಭಾಷಾ ನಿಕಾಯದ ಡೀನ್ ಡಾ.ಎಫ್.ಟಿ.ಹಳ್ಳಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾತೃ ಭಾಷೆಯೊಂದಿಗೆ ಇನ್ನೊಂದು ಭಾಷೆಯನ್ನು ಕಲಿಯುವುದು ಇಂದಿನ ಕಾಲದಲ್ಲಿ ಮುಖ್ಯವಾಗಿದೆ. ಭಾಷಾಂತರ ಕಲೆಯನ್ನು ಹವ್ಯಾಸವಾಗಿ ಬೆಳೆಸಿದರೆ ಕಥೆ, ಕೃತಿ, ಲೇಖನಗಳನ್ನು ಬೇರೆ ಭಾಷೆಗೆ ಅನುವಾದ ಮಾಡುವುದು ಸುಲಭವಾಗುತ್ತದೆ. ವಿವಿ ಮಟ್ಟದಲ್ಲಿ ನಡೆಸುವ ಇಂತಹ ಭಾಷಾಂತರ ಕಮ್ಮಟಗಳು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತವೆ ಎಂದರು.

ಡಾ.ಎ.ಮೋಹನ್ ಕುಂಟಾರ್, ಡಿ.ಪ್ರಭಾ, ಹಳೆಯ ವಿದ್ಯಾರ್ಥಿ ಟಿ.ಎಚ್.ಬಸವರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net