ತ್ಯಾಜ್ಯ ನಿರ್ವಹಣೆಗೆ ಎಲ್ಲರೂ ಕೈಜೋಡಿಸಿ

news
ಕನ್ನಡ ವಿವಿಯ ಭುವನ ವಿಜಯ ಸಭಾಂಗಣದಲ್ಲಿ ಸೋಮವಾರ ತ್ಯಾಜ್ಯ ನಿರ್ವಹಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಹಾಗೂ ಯುವಕರ ಪಾತ್ರ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿದರು.
Published on

ಹೊಸಪೇಟೆ: ಪ್ರತಿದಿನ ಒಬ್ಬ ಮನುಷ್ಯನಿಂದ ಅಂದಾಜು 250 ರಿಂದ 300 ಗ್ರಾಂ ವರೆಗೆ ತ್ಯಾಜ್ಯ ಉತ್ಪತ್ತಿಯಾಗುತ್ತದ್ದು, ತ್ಯಾಜ್ಯ ನಿರ್ವಹಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಜತೆಗೆ ಕೈಜೋಡಿಸಬೇಕು ಎಂದು ಕ್ಯಾಶುಟೇಕ್ ಸಂಸ್ಥೆಯ ಸಿಇಒ ಶರಣಬಸಪ್ಪ ಪಟ್ಟೆದ್ ಹೇಳಿದರು.

ರಾಷ್ಟಿçÃಯ ಸೇವಾ ಯೋಜನೆ ಘಟಕದಿಂದ ಕನ್ನಡ ವಿವಿಯ ಭುವನ ವಿಜಯ ಸಭಾಂಗಣದಲ್ಲಿ ಸೋಮವಾರ ತ್ಯಾಜ್ಯ ನಿರ್ವಹಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಹಾಗೂ ಯುವಕರ ಪಾತ್ರ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವು ಪ್ರತಿ ದಿನ ಬಳಸುವ ವಸ್ತುಗಳು ಮರುಬಳಕೆ ಆಗುವಂತೆ ಬೇರ್ಪಡಿಸಬೇಕು. ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು. ತ್ಯಾಜ್ಯದಲ್ಲಿ ಹಸಿಕಸ ಮತ್ತು ಒಣಕಸವನ್ನು ಮನೆಯಲ್ಲಿಯೇ ಬೇರ್ಪಡಿಸಬೇಕು. ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಸಮಾಜಮುಖಿ ಕೆಲಸ ಮಾಡುತ್ತಿರುವುದರಿಂದ ಕಸವಿಲೆವಾರಿ ಬಗ್ಗೆ ತಿಳಿಸಬೇಕು ಎಂದರು.

ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಳಸಿ ಬಿಸಾಡುವ ಸಂಸ್ಕೃತಿಗೆ ನಾವು ಬಂದು ನಿಂತಿದ್ದೇವೆ. ಇದರಿಂದಾಗಿ ದೊಡ್ಡ ಸಮಸ್ಯೆ ಉಂಟಾಗುತ್ತಿದೆ. ಕಾರ್ಖಾನೆಗಳಿಂದ ಹೊರಬರುವ ತ್ಯಾಜ್ಯಗಳಿಂದ ಸುತ್ತಮುತ್ತ ವಾಸಿಸುವ ಜನರು ಕಾಯಿಲೆಯಿಂದ ಬಳಲುತ್ತಿದ್ದಾರೆ. ಬೇಸಿಗೆಯ ದಿನಗಳಲ್ಲಿ ಈ ಭಾಗಗಳಲ್ಲಿ ಬೂದಿ ತುಂಬಿದ ಮನೆಗಳು ಕಂಡುಬರುತ್ತವೆ. ಪ್ರಪಂಚದ ಮುಖ್ಯ ಸಮಸ್ಯೆಯು ಕಸದ ನಿರ್ವಹಣೆಯೇ ಆಗಿದೆ. ಪ್ರವಾಸಿ ಸ್ಥಾನವಾದ ಹಂಪಿ ಹಾಗೂ ಹಲವಾರು ಕಡೆಗಳಲ್ಲಿ ಪ್ರವಾಸಿಗರಿಂದ ಅತಿ ಹೆಚ್ಚಾಗಿ ಪ್ಲಾಸ್ಟಿಕ್ ವಸ್ತುಗಳ ಬಳಕೆಯಾಗುತ್ತಿವೆ. ಗುಡ್ಡಗಾಡು ಪ್ರದೇಶದಲ್ಲಿ ನಮ್ಮ ಕಣ್ಣಿಗೆ ಪ್ಲಾಸ್ಟಿಕ್‌ಗಳೇ ಕಾಣುತ್ತವೆ. ಇದು ಪರಿಸರ ನಾಶಕ್ಕೆ ಪ್ರಮುಖ ಪಾತ್ರವಹಿಸುತ್ತದೆ ಎಂದರು.

ಕುಲಸಚಿವ ಡಾ.ವಿಜಯ ಪೂಣಚ್ಚ ತಂಬAಡ, ಕ್ಯಾಶೋಟೆಕ್ ಸಂಸ್ಥೆಯ ತರಬೇತಿದಾರ ಬಾಲಚಂದ್ರ ಜಾಬ್ ಶೆಟ್ಟಿ, ಎನ್‌ಎಸ್‌ಎಸ್ ಘಟಕದ ಸಂಯೋಜನಾಧಿಕಾರಿ ಡಾ.ಎ.ಶ್ರೀಧರ್, ಅಧ್ಯಾಪಕಿ ಜ್ಯೋತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net