

ಹೊಸಪೇಟೆ: ಅಧ್ಯಯನದ ವಿಷಯಕ್ಕೆ ಬಂದಾಗ ಅಸಾಧ್ಯ ಎಂಬ ಶಬ್ದಕ್ಕೆ ವಿದ್ಯಾರ್ಥಿಗಳು ಸ್ಥಾನ ಕೊಡಬಾರದು. ನಿರಂತರ ಕಲಿಕೆಯು ನಮ್ಮನ್ನು ಅತ್ಯುತ್ತಮ ಸಂಶೋಧಕರನ್ನಾಗಿ ತಯಾರು ಮಾಡುತ್ತದೆ ಎಂದು ಮುಧೋಳನ ರಾಷ್ಟ್ರೀಯ ಸಂಶೋಧನ ವೇದಿಕೆಯ ಗೌರವಾಧ್ಯಕ್ಷ ಡಾ.ಸಂಗಮೇಶ ಕಲ್ಯಾಣಿ ಹೇಳಿದರು.
ಕನ್ನಡ ವಿವಿಯ ಹಸ್ತಪ್ರತಿಶಾಸ್ತ್ರ ವಿಭಾಗದದಲ್ಲಿ ಸೋಮವಾರ ತಾಳೆಗರಿ ಮತ್ತು ತಾಮ್ರ ಪತ್ರಗಳ ತಯಾರಿಕೆ, ಲೇಖನಿ ನನ್ನ ಅನುಭವ ಮತ್ತು ಆಯುರ್ವೇದ ಹಸ್ತಪ್ರತಿಗಳ ಪ್ರಯೋಜನಗಳ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ತಾಳೆಗರಿಯ ಮೇಲೆ ಬರೆಯಲು ಹಾಗೂ ತಾಮ್ರ ಪಟದ ಮೇಲೆ ಕೆತ್ತಲು ತಾಳ್ಮೆ ಬೇಕು. ಕಣ್ಣಿನ ದೃಷ್ಟಿ, ಉಸಿರಾಟ ಪೂರಕವಾಗುತ್ತದೆ. ಈ ಸಂದರ್ಭದಲ್ಲಿ ಹೃದಯಕ್ಕೆ ಆಗುವ ಒತ್ತಡವನ್ನು ತಡೆಯಲು ಪ್ರಾಣಾಯಾಮ ಮಾಡಲೇಬೇಕು. ಕಣ್ಣಿಗಾಗಿ ತ್ರಾಟಕ ಆಸನ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ವಿವರಿಸಿ ಪ್ರಾಯೋಗಿಕವಾಗಿ ತಿಳಿಸಿದರು.
ಬಳ್ಳಾರಿಯ ವೈದ್ಯ ಎಂ.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಕನ್ನಡ ವಿವಿಯ ಹಸ್ತಪ್ರತಿ ವಿಭಾಗದಲ್ಲಿರುವ ತಾಳೆಗರಿಯ ಹಸ್ತಪ್ರತಿಗಳು ನಾನು ವೈದ್ಯನಾಗುವಲ್ಲಿ ಅಧ್ಯಯನ ಮಾಡಲು ಪ್ರೇರೇಪಿಸಿವೆ. ಹಸ್ತಪ್ರತಿಗಳಲ್ಲಿ ವೈದ್ಯಕೀಯ ಶಾಸ್ತçಗಳಿವೆ. ಹಸ್ತಪ್ರತಿಗಳ ಅಧ್ಯಯನದಿಂದ ವೈದ್ಯರಾಗಬಹುದು, ತ್ರಿಕಾಲಜ್ಞಾನಿಗಳಾಗಬಹುದು, ಸಮಸ್ಯೆಗಳನ್ನು ಬಗೆಹರಿಸಬಲ್ಲ ಮಾಂತ್ರಿಕರಾಗಬಹುದು, ವಿಜ್ಞಾನಿಗಳಾಗಬಹುದು. ಇಂತಹ ಆಯ್ಕೆ ವಿದ್ಯಾರ್ಥಿಗಳ ಮುಂದೆ ಇದೆ. ಆರೋಗ್ಯಕ್ಕೆ ಸಂಬAಧಪಟ್ಟ ಕೋಟಿ ಬೆಲೆಬಾಳುವ ಆರೋಗ್ಯದ ಆಯುರ್ವೇದ ಸೂತ್ರಗಳು ಹಸ್ತಪ್ರತಿಗಳಲ್ಲಿವೆ. ರಾಜಕ್ಷಯ(ಏಡ್ಸ್) ರೋಗ, ಕ್ಯಾನ್ಸ್ರ್, ಬಂಜೆತನ, ಫಲವಂತಿಕೆ, ಮೆಡಿಸಿನ್ ರಿಯಾಕ್ಷನ್, ಆಧುನಿಕ ಕಾಲದ ಪಿಸಿಓಡಿ ಅಲ್ಲದೇ ಕೊರಾನ ವೈರಸ್‌ಗೆ ಸಂಬAಧಪಟ್ಟAತೆ ಆಯುರ್ವೇದ ಹಸ್ತಪ್ರತಿಗಳಲ್ಲಿ ಗಿಡಮೂಲಿಕೆಯ ಪರಿಹಾರಗಳಿವೆ ಎಂದರು.
ಕುಲಪತಿ ಡಾ.ಪರಮಶಿವಮೂರ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಹಸ್ತಪ್ರತಿಶಾಸ್ತç ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ, ಪ್ರಾಧ್ಯಾಪಕರಾದ ಡಾ.ಎಫ್.ಟಿ.ಹಳ್ಳಿಕೇರಿ, ಡಾ.ಚನ್ನವೀರಪ್ಪ, ಡಾ.ಡಿ.ಮೀನಾಕ್ಷಿ, ಸಂಶೋಧನ ವಿದ್ಯಾರ್ಥಿ ಗೋಣಿಬಸಪ್ಪ, ಮಲ್ಲಿಕಾರ್ಜುನ, ಬಿ.ಸತೀಶ ಮತ್ತಿತರರಿದ್ದರು.