ಸಾಹಿತ್ಯವನ್ನು ನಂಬಿದರೆ ಪ್ರಸಿದ್ಧ ಕವಿ ಆಗುವಿರಿ

news
ಕನ್ನಡ ವಿವಿಯಲ್ಲಿ ಹಮ್ಮಿಕೊಂಡ ಜಾನಪದ ಸಾಹಿತ್ಯ ಇತ್ತೀಚಿನ ಪ್ರವೃತ್ತಿಗಳು ವಿಷಯ ಕಾರ್ಯಕ್ರಮದಲ್ಲಿ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಸಿದ್ದಪ್ಪ ಬಿದರಿ ಮಾತನಾಡಿದರು.
Published on

ಹೊಸಪೇಟೆ: ನೀವು ಸಾಹಿತ್ಯದ ಮೇಲೆ ನಂಬಿಕೆ ಇಡಿ ನಿಮ್ಮನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತದೆ. ನಾನು ಬಾಲ್ಯದಲ್ಲಿ ನುಡಿಯುತ್ತಿದ್ದ ಪದಗಳು ನನ್ನನ್ನು ಈ ಮಟ್ಟಕ್ಕೆ ಬೆಳೆಸಿವೆ ಎಂದು ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಸಿದ್ದಪ್ಪ ಬಿದರಿ ಹೇಳಿದರು.

ಕನ್ನಡ ವಿವಿಯ ಹಾಲುಮತ ಅಧ್ಯಯನ ಪೀಠದ ಸಭಾಂಗಣದಲ್ಲಿ ಜಾನಪದ ಸಾಹಿತ್ಯ ಇತ್ತೀಚಿನ ಪ್ರವೃತ್ತಿಗಳು ವಿಷಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಣ್ಯಾರಿಗೆ ಸಂಶಯ ಬಾಳ, ದಡ್ಡರಿಗೆ ಧೈರ್ಯ ಬಾಳಂತ ಈಗಾಗಿ ಜೀವನಕ್ಕೆ ನೆಮ್ಮದಿ ಇಲ್ಲದಂತಾಗಿದೆ. ಜಾತಿಗೊಂದು ಜಾತ್ರಿ ಮಾಡುತ್ತೇವೆ. ಜಾತ್ರಾಗ ಓಡದಾಡಿ ಸ್ಟೇಷನ್ ದಾರಿ ಹಿಡಿತೆವು. ಇವತ್ತಿನ ಸಮಾಜ ಹೆಂಗ್ ಆಗಿದೆ ಅಂದರೆ ಕೋಳಿಗೆ ನೋವಿನ ಪುಚ್ಚಾ ನಾಯಿ ಬಾಲಸಿದ ಮಾಡಾಕ ಹೊಂಟೆವು. ಹೀಗೆ ಹಲವು ಹಾಡುಗಳ ಮೂಲಕ ನಾವು ಹೇಗೆ ಸೃಷ್ಟಿ ವಿರುದ್ಧ ನಿಂತೇವು ಎಂದರು.

ಹಾಲುಮತ ಅಧ್ಯಯನ ಪೀಠದ ನಿರ್ದೇಶಕ ಡಾ.ಎಫ್.ಟಿ.ಹಳ್ಳಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿದ್ದಪ್ಪ ಬಿದರಿಯವರು ಅಶು ಕವಿಗಳಾಗಿ ಹೆಸರುವಾಸಿಯಾಗಿದ್ದಾರೆ. ಇವರು ವಿದ್ಯವಂತರಲ್ಲದಿದ್ದರೂ ತಮ್ಮ ಅನುಭವಗಳ ಮೂಲಕ ಹಲವಾರು ಕವನಸಂಕಲನಗಳನ್ನು ರಚಿಸಿದ್ದಾರೆ. ಸಿದ್ದಪ್ಪ ಅವರ ಹಾಡುಗಳಲ್ಲಿ ಕಷ್ಟ, ಸುಖ, ಕರುಣೆ, ಪ್ರೀತಿ, ಹಾಸ್ಯ, ಕೋಪ ಹೀಗೆ ಎಲ್ಲಾ ರೀತಿಯ ಅನುಭವಗಳನ್ನು ನಾವು ಕಾಣಬಹುದು. ಇವರ ಕವನಗಳ ಇನ್ನೊಂದು ವಿಶೇಷತೆ ಏನೆಂದರೆ ಇವು ಸಹಜವಾಗಿಯೇ ಜನರಿಗೆ ಅರ್ಥವಾಗುತ್ತವೆ. ಸಿದ್ದಪ್ಪ ಬಿದರಿಯವರ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ ಹೊಲಿದು ಬಂದಿರುವುದು. ಇವರ ಕವನಗಳು ಜೀವನದ ಮೌಲ್ಯಗಳನ್ನು ತಿಳಿಸುವ ಸಾಧನಗಳಾಗಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net