ಕನ್ನಡ ವಿವಿಯಲ್ಲಿ ವಾರದ ಮಾತು

PHD
ಕನ್ನಡ ವಿವಿಯಲ್ಲಿ ಗುರುವಾರ ನಡೆದ ವಾರದಮಾತು ಕಾರ್ಯಕ್ರಮದಲ್ಲಿ ಸಂಶೋಧನ ವಿದ್ಯಾರ್ಥಿನಿ ಶ್ರೀದೇವಿ ಮಾತನಾಡಿದರು.
Published on

ಹೊಸಪೇಟೆ: ಸಮಾಜ ಮತ್ತು ಸಂಸ್ಕೃತಿಯ ವಿಚಾರಗಳು ಭಾಷೆಯ ಮುಖಾಂತರ ಅಭಿವ್ಯಕ್ತಗೊಳ್ಳುತ್ತವೆ ಎಂದು ಕನ್ನಡ ವಿವಿಯ ಸಂಶೋಧನ ವಿದ್ಯಾರ್ಥಿನಿ ಶ್ರೀದೇವಿ ಹೇಳಿದರು.

ಕನ್ನಡ ವಿವಿಯ ಕನ್ನಡ ಭಾಷಾಧ್ಯಯನ ವಿಭಾಗದಲ್ಲಿ ಗುರುವಾರ ನಡೆದ ರಾಯಚೂರು ಪರಿಸರದ ಸಾಂಸ್ಕೃತಿಕ ವಲಯದಲ್ಲಿ ಬಳಕೆಗೊಳ್ಳುವ ವಿಶಿಷ್ಟ ಪದಗಳ ಕುರಿತ ಚರ್ಚೆ ಎಂಬ ವಾರದಮಾತು ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜ ಮತ್ತು ಸಂಸ್ಕೃತಿ ಒಟ್ಟಿಗೆ ಸಾಗುವಂತವು. ಕೆಲವು ಸಮುದಾಯಗಳಲ್ಲಿ ಭಾಷಾರೂಪಗಳು ಆ ಸಮುದಾಯದ ಒಟ್ಟು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ರಾಯಚೂರು ಪರಿಸರದ ಸಾಂಸ್ಕೃತಿಕ ವಲಯದಲ್ಲಿ ಅಚ್ಚುಡ, ರ‍್ಲ, ಎಂಬಲ, ಚಾಜ, ದಟ್ಟಿ, ಬತಾಯಿ, ಸೂಗುಬುತ್ತಿ ಎಂಬ ಪದಗಳು ಮದುವೆ, ಜಾತ್ರೆ, ಹಬ್ಬ ಹರಿದಿನಗಳಲ್ಲಿ ಬಳಕೆಯಾಗುವುದನ್ನು ಗಮನಿಸಬಹುದು ಎಂದರು.

ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥ ಡಾ.ಪಿ.ಮಹಾದೇವಯ್ಯ, ಸಂಶೋಧನಾ ವಿದ್ಯಾರ್ಥಿಗಳಾದ ಎಸ್.ದಿನೇಶ್, ಪಂಪಾಪತಿ, ಟಿ.ವಿಶ್ವನಾಥ, ಕಾರ್ಯಕ್ರಮದ ಸಂಚಾಲಕರಾದ ಪಿ.ಚೌಡಪ್ಪ, ಅಂಬಿಕಾ, ಚೆಂದಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net