ಮಗುವಿಗೆ ಲಿಪಿ ಸಂಸ್ಕಾರವುದು ತಾಯಿಯಿಂದಲೇ

vv
ಕನ್ನಡ ವಿವಿಯಲ್ಲಿ ಶುಕ್ರವಾರ ಡಾ. ಸಂಗಮೇಶ ಕಲ್ಯಾಣಿಯವರು ಸ್ವತಃ ಕೈಯಿಂದ ರನ್ನನ ಗದಾಯುದ್ಧದ ಪದ್ಯಗಳನ್ನು ತಾಮ್ರಪಟದ ಮೇಲೆ ಬರೆದಿರುವುದನ್ನು ವಿದ್ಯಾರ್ಥಿಗಳಿಗೆ ತೋರಿಸಿದರು.
Published on

ಹೊಸಪೇಟೆ: ಲಿಪಿ ರಚನೆಯ ವೈಶಿಷ್ಟ÷್ಯ ತಿಳಿದರೆ ಜಗತ್ತಿನ ಯಾವುದೇ ಭಾಷೆಯನ್ನು ಅರ್ಥೈಸಿಕೊಳ್ಳುವುದು ಕಷ್ಟವೆನಿಸಲಾರದು. ಲಿಪಿ ಸಂಸ್ಕಾರವು ಮಗುವಿಗೆ ತಾಯಿಯಿಂದಲೇ ಬರುತ್ತದೆ ಎಂದು ಮುಧೋಳಿನ ಮೋಡಿಲಿಪಿ ತಜ್ಞ ಡಾ.ಸಂಗಮೇಶ ಕಲ್ಯಾಣಿ ಹೇಳಿದರು.

ಕನ್ನಡ ವಿವಿಯ ಸಂಗೀತ ಮತ್ತು ನೃತ್ಯ ವಿಭಾಗದಿಂದ ಶುಕ್ರವಾರ ಸ್ವರ ಸಂಚಾರ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಲಿಪಿ ಮತ್ತು ಭಾಷೆ ವಿಶೇಷ ಉಪನ್ಯಾಸ ನೀಡಿದರು.

ಕನ್ನಡ ಲಿಪಿಯ ಬೆಳವಣಿಗೆ, ಮೋಡಿಲಿಪಿಯ ವೈಶಿಷ್ಟö್ಯ ಮತ್ತು ಲಿಪಿ ಹಾಗೂ ಭಾಷೆಗೆ ಇರುವ ಸಂಬAಧಗಳ ಕುರಿತು ವಿಸ್ತಾರವಾಗಿ ಚರ್ಚಿಸಿದರು. ತಾವೇ ಸ್ವತಃ ತಾಮ್ರಪಟದಲ್ಲಿ, ಕಾಷ್ಠದಲ್ಲಿ, ತಾಳೆಗರಿಯಲ್ಲಿ ರಚಿಸಿರುವ ರನ್ನನ ಗದಾಯುದ್ಧ ಕಾವ್ಯದ ಪುಟಗಳನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಿ ಅದರ ರಚನೆಯ ಹಿನ್ನೆಲೆ ಹಾಗೂ ಸ್ವರೂಪವನ್ನು ವಿವರಿಸಿದರು. ಈ ಕಾಲದಲ್ಲಿ ಈ ರೀತಿ ತಾಮ್ರಪಟದಲ್ಲಿ ಲಿಪಿ ಮಾಡಿದವರಲ್ಲಿ ಕಲ್ಯಾಣಿಯವರೇ ಮೊದಲಿಗರಾಗಿದ್ದಾರೆ.

ಸಿನಿಮಾ ನಿರ್ದೇಶಕ ಶ್ರೀಧರ ಜಾವೂರ ಮಾತನಾಡಿ, ಹೊಸ ಪ್ರತಿಭೆಗಳಿಗೆ ಸಿನಿಮಾ ವಲಯದಲ್ಲಿರುವ ಅವಕಾಶ ಸದುಪಯೋಗ ಪಡುಕೊಳ್ಳಬೇಕು. ಕೇವಲ ಎರಡುವರೆ ತಾಸಿನ ಸಿನಿಮಾ ನಿರ್ದೇಶನಕ್ಕಿಂತಲೂ ಸಮಾಜಕ್ಕಾಗಿ ಸಾಧಕರನ್ನು ತಯಾರು ಮಾಡುವ ಗುರುವಿನ ಶಕ್ತಿ ದೊಡ್ಡದು ಎಂದು ಅಭಿಪ್ರಾಯಪಟ್ಟರು.

ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಮಾತನಾಡಿ, ಮೋಡಿಲಿಪಿ ಕಲಿಕೆಯಲ್ಲಿ ತಮ್ಮ ಮತ್ತು ಸಂಗಮೇಶ ಕಲ್ಯಾಣಿಯವರ ಬಹಳ ವರ್ಷಗಳ ಪಯಣವನ್ನು ಮೆಲಕು ಹಾಕಿದರು. ಕಲಿತ ಅಕ್ಷರದಿಂದ ಯಾವುದೇ ನಷ್ಟವಿಲ್ಲ; ಅದು ಸಮಾಜದಲ್ಲಿ ಒಂದಲ್ಲ ಒಂದು ರೀತಿ ಪ್ರಯೋಜನಕಾರಿಯಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net