

ಹೊಸಪೇಟೆ: ಜೀವ ವಿಜ್ಞಾನದಿಂದ ನಾವು ಹೊಸ ಹೊಸ ಜೀವಿಗಳನ್ನು ಸೃಷ್ಠಿಸಲು ಸಾಧ್ಯವಿದೆ. ಆದರೆ ಅದು ಎಷ್ಟರ ಮಟ್ಟಿಗೆ ಸರಿ ಎಂಬ ಚರ್ಚೆಗಳು ನಡೆಯುತ್ತಿವೆ ಎಂದು ಬೆಂಗಳೂರು ವಿವಿಯ ಸೂಕ್ಷö್ಮ ಜೀವ ವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಟಿ.ಗಿರೀಶ್ ಹೇಳಿದರು.
ಕನ್ನಡ ವಿವಿಯ ವಿಜ್ಞಾನಗಳ ಇತಿಹಾಸ ವಿಭಾಗದಿಂದ ಪಂಪ ಸಭಾಂಗಣದಲ್ಲಿ ಗುರುವಾರ ಪರಿಸರ ಮತ್ತು ಹವಾಮಾನ ಬದಲಾವಣೆ ವಿಶೇಷ ಉಪನ್ಯಾಸ ಮಾಲೆ-5 ಉದ್ಘಾಟಿಸಿ ಮಾತನಾಡಿದರು.
ಭೂಮಿಯಲ್ಲಿ ಜೀವಿಗಳ ಸೃಷ್ಠಿಗೆ ಪಂಚಭೂತಗಳೇ ಮೂಲ ಕಾರಣ. ಜೀವಿಯ ಉಗಮದಲ್ಲಿ ಮಹತ್ವದ ಪಾತ್ರವಹಿಸುವ ಗಾಳಿ, ನೀರು ಮತ್ತು ಬೆಳಕನ್ನು ಬಂಧನಗೊಳಿಸುತ್ತಿದ್ದೇವೆ. ಇದು ಪ್ರಕೃತಿಯ ವಿನಾಶಕ್ಕೆ ಪ್ರಮುಖ ಕಾರಣವಾಗಿದೆ. ಪ್ರತಿಯೊಂದು ಜೀವಿಗೂ ಅದರದೇ ಆದ ವೈಶಿಷ್ಟö್ಯವಿದ್ದು, ಅದರ ಅಸ್ಮಿತೆಯನ್ನು ಉಳಿಸಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ. ನಮಗೆ ಪ್ರಕೃತಿ ಬೇಕೆ ಹೊರತು, ಪ್ರಕೃತಿಗೆ ನಮ್ಮ ಅವಶ್ಯಕತೆಯಿಲ್ಲ. ಪರಿಸರ ಇಲ್ಲದಿದ್ದರೆ ನಾವು ಬದುಕಲು ಸಾಧ್ಯವಿಲ್ಲ. ಆದ್ದರಿಂದ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಜೀವನದ ಪಾಠವಾಗಬೇಕು ಎಂದರು.
ಬೆAಗಳೂರು ವಿವಿಯ ಪ್ರಾಧ್ಯಾಪಕ ಪ್ರೊ.ಬಿ.ಸಿ.ನಾಗರಾಜ ಮಾತನಾಡಿ, ಒಂದು ದೇಶದ ಅಭಿವೃದ್ಧಿಯಲ್ಲಿ ಪರಿಸರ, ಸಮಾಜ ಮತ್ತು ಆರ್ಥಿಕತೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂದರು.
ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ಉತ್ತಮ ವಾತಾವರಣದಲ್ಲಿದ್ದಾಗ ನಮಗೆ ಅದರ ಅರಿವು ಆಗುವುದಿಲ್ಲ. ಗಣಿಗಾರಿಕೆ, ಕಾರ್ಖಾನೆ, ಟ್ರಾಫಿಕ್ ಜಾಂನಿAದ ಆಗುವ ಮಾಲಿನ್ಯದಿಂದ ಕೂಡಿದ ಪರಿಸರಕ್ಕೆ ಹೋದಾಗ ನಮಗೆ ಪರಿಸರದ ಮಹತ್ವ ಗೊತ್ತಾಗುತ್ತದೆ. ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು
ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬAಡ, ಪ್ರಾಧ್ಯಾಪಕರಾದ ಪ್ರೊ.ಶೈಲಜ ಇಂ.ಹಿರೇಮಠ ಇದ್ದರು..