ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಿ

news
ಹೊಸಪೇಟೆ ಶಂಕರ್ ಸಿಂಗ್ ಸರ್ಕಾರಿ ಪದವಿ ಕಾಲೇಜಿನ ಸಂಭಾಗಣದಲ್ಲಿ ಬುಧವಾರ ನಡೆದ ಮನೆ ಮನೆಗೆ ಕನ್ನಡ ಪುಸ್ತಕ ಅಭಿಯಾನದಲ್ಲಿ ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ, ಪ್ರಾಂಶುಪಾಲ ಕೆ.ಶಿವಪ್ಪ, ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬAಡ, ನಿರ್ದೇಶಕ ಡಾ.ಮಾಧವ ಪೆರಾಜೆ ಇತರರಿದ್ದರು.
Published on

ಹೊಸಪೇಟೆ: ಜಾಗತೀಕ ಕಾಲದಲ್ಲಿ ದುಬಾರಿ ಬೆಲೆಯ ಮೊಬೈಲ್‌ಗಳನ್ನು ಹಿಡಿದು ಕಾಲಹರಣ ಮಾಡುವ ಬದಲು, ಕಡಿಮೆ ಬೆಲೆಯಲ್ಲಿ ಜ್ಞಾನ ನೀಡುವ ಪುಸ್ತಕಗಳನ್ನು ಓದುವ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.

ಹಂಪಿಯ ಕನ್ನಡ ವಿವಿಯ ಪ್ರಸಾರಾಂಗದಿAದ ಶಂಕರ್ ಸಿಂಗ್ ಸರ್ಕಾರಿ ಪದವಿ ಕಾಲೇಜಿನ ಸಂಭಾಗಣದಲ್ಲಿ ಬುಧವಾರ ಮನೆ ಮನೆಗೆ ಕನ್ನಡ ಪುಸ್ತಕ ಅಭಿಯಾನ ವಿಶಿಷ್ಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮದುವೆ, ಗೃಹ ಪ್ರವೇಶ ಮೊದಲಾದ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿಯೂ, ಪಾತ್ರೆ ಮೊದಲಾದ ಉಡುಗೊರೆಗಳನ್ನು ಕೊಡುವ ಬದಲು ಶಾಶ್ವತವಾಗಿ ಜ್ಞಾನದ ರೂಪದಲ್ಲಿ ಮನೆಯಲ್ಲಿರಬಹುದಾದ ಪುಸ್ತಕಗಳನ್ನೇ ಉಡುಗೊರೆಯಾಗಿ ನೀಡಿ ಎಂದು ಸಲಹೆಗೆ ನೀಡಿದರು. ಪ್ರಾಂಶುಪಾಲ ಕೆ.ಶಿವಪ್ಪ ಅಧ್ಯಕ್ಷತೆ ವಹಿಸಿದರು. ವಿವಿಯ ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬAಡ, ನಿರ್ದೇಶಕ ಡಾ.ಮಾಧವ ಪೆರಾಜೆ, ಪ್ರಾಧ್ಯಾಪಕ ಡಾ.ನಾಗಣ್ಣ ಕಿಲಾರಿ, ರಘುಪ್ರಸಾದ್, ಅಮೃತ ನಾಯ್ಕ, ಡಾ.ಗಿರಿಜಾ ಬೋದುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net