

ಹೊಸಪೇಟೆ: ಫಲಪೂಜಾ ಮಹೋತ್ಸವದ ನಿಮಿತ್ತ ದಕ್ಷಿಣಕಾಶಿ ಹಂಪಿ ವಿರೂಪಾಕ್ಷೇಶ್ವರ ದೇಗುಲಕ್ಕೆ ಜ್ಞಾನಪೀಠ ಪುರಸ್ಕೃತ ಹಾಗೂ ಕನ್ನಡ ವಿವಿಯ ಮೊಲದ ಕುಲಪತಿಯಾಗಿದ್ದ ಡಾ.ಚಂದ್ರಶೇಖರ್ ಕಂಬಾರ ಮಂಗಳವಾರ ಭೇಟಿ ನೀಡಿ ದರ್ಶನ ಪಡೆದರು.
ನಂತರ ಪಾರ್ವತಿ ದೇವಿ ಹಾಗೂ ಕನ್ನಡಾಂಬೆ ತಾಯಿ ಭುವನೇಶ್ವರಿ ದೇವಿಯ ದರ್ಶನ ಪಡೆದರು. ಅವರ ಸ್ನೇಹಿತ ಹಾಗೂ ಮಲೆಯಾಳಿ ಕವಿ ಸುಬ್ರಹ್ಮಣ್ಯರ ಜತೆಗೆ ಭೇಟಿ ನೀಡಿ ಹಂಪಿ ಪರಿಸರದ ಮಹತ್ವ ತಿಳಿಸಿದರು. ನಂತರ ಕನ್ನಡ ವಿವಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದರು.
ಅವರನ್ನು ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಗೌರವಿಸಿ, ಸನ್ಮಾನಿಸಿದರು. ನಂತರ ವಿದ್ಯಾರಣ್ಯ ಕ್ಯಾಂಪಸನ್ನು ವೀಕ್ಷಿಸಿ, ಸಂತಸಪಟ್ಟರು. ಕುಲಸಚಿವ ಡಾ.ವಿಜಯ್ ಪುಣಚ್ಚ ತಂಬAಡ, ಪ್ರಾಧ್ಯಾಪಕ ಅಮರೀಶ್ ಯತಗಲ್ ಇದ್ದರು.