ಚರಿತ್ರೆ ಪ್ರಕಾರಗಳನ್ನು ಸಂಶೋಧನಾರ್ಥಿಗಳು ಅರಿಯಿರಿ

news
ಕನ್ನಡ ವಿವಿಯ ನುಡಿಕಟ್ಟಡದಲ್ಲಿ ಬುಧವಾರ ಹಂಪಿ ಇತಿಹಾಸ ಮತ್ತು ಪುರಾತತ್ವ ವಿಶೇಷ ಉಪನ್ಯಾಸದಲ್ಲಿ ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬAಡ ಮಾತನಾಡಿದರು.
Published on

ಹೊಸಪೇಟೆ: ಯಾವುದೇ ಪ್ರದೇಶದ ಇತಿಹಾಸವು ಅಧ್ಯಯನಗಳಿಂದ ಹೊಸ ಅರ್ಥ ಮತ್ತು ವಿವಿಧ ಮಗ್ಗಲುಗಳಿಗೆ ಬದಲಾಗುತ್ತ ಹೋಗುತ್ತದೆ. ಇದನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ಅವಶ್ಯಕವಾಗಿದೆ ಎಂದು ಕನ್ನಡ ವಿವಿಯ ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬAಡ ಹೇಳಿದರು.

ಕನ್ನಡ ವಿವಿಯ ನುಡಿಕಟ್ಟಡದಲ್ಲಿ ಬುಧವಾರ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಿಂದ ಹಂಪಿ ಇತಿಹಾಸ ಮತ್ತು ಪುರಾತತ್ವ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇತಿಹಾಸದ ಸಂಶೋಧನೆಯಲ್ಲಿ ಸಿದ್ದಪಡಿಸಿದ ವಿಷಯಗಳು ತೀರ್ಪುಗಳಂತೆ ಸ್ಥಿರವಾಗಿರದೆ ಸಂಶೋಧನೆಯಿAದ ಹೊಸ ವಿಷಯಗಳಿಂದ ಮಾರ್ಪಾಡನ್ನು ಪಡೆಯುತ್ತವೆ. ಇತಿಹಾಸವನ್ನು ಬರೆವಣೆಗೆಯೂ ಅನೇಕ ಆಕಾರಗಳ ಆಧಾರದ ಮೇಲೆ ಸತ್ಯಾಂಶ ಶೋಧನೆಯಾಗಿದೆ. ಇತಿಹಾಸವು ಧಾರ್ಮಿಕ ಚರಿತ್ರೆ, ರಾಜಕೇಂದ್ರಿತ ಚರಿತ್ರೆ, ಸಮುದಾಯ ಕೇಂದ್ರಿತ ಚರಿತ್ರೆ ಹೀಗೆ ಪ್ರಕಾರಗಳನ್ನು ಒಳಗೊಂಡಿರುವುದು. ಇದನ್ನು ಕಟ್ಟಿಕೊಡುವಲ್ಲಿ ಯುವ ಸಂಶೋಧನಾರ್ಥಿಗಳು ಕೆಲವು ಸೂಕ್ಷö್ಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.

ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ ಮುಖ್ಯಸ್ಥ ಡಾ.ವಾಸುದೇವ ಬಡಿಗೇರ ಮಾತನಾಡಿ, ಹಂಪಿ ಪ್ರದೇಶವು ಪ್ರಾಕೃತಿಕ ಮತ್ತು ಸಾಂಸ್ಕೃತಿಕ ವಿಷಯಗಳಿಂದ ವಿಶ್ವ ಪ್ರಸಿದ್ಧ ತಾಣ. ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡವರು ಹಂಪಿಗೆ ಬಂದರೆ ಜೀವನದಲ್ಲಿ ಮರಳಿ ಅವುಗಳನ್ನು ಪಡೆದುಕೊಳ್ಳುತ್ತಾರೆ ಎಂಬುದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಇದರಿಂದ ಹಂಪಿ ಧಾರ್ಮಿಕ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ಹಂಪಿ ಇತಿಹಾಸ ಆರಂಭವಾಗುವುದು ಪಂಪಾ ಕ್ಷೇತ್ರದಿಂದ ಅಥವಾ ಪಂಪ ಸರೋವರದಿಂದ. ಮಾನವನು ಧಾರ್ಮಿಕವಾಗಿ ಈ ಕ್ಷೇತ್ರಕ್ಕೆ ಸಂಬAಧಿಸಿದAತೆ ಶಿವ ಪಾರ್ವತಿಯರ ವಿವಾಹ ಸ್ಥಳ ಇದಾಗಿದೆ ಎಂದು ಜನಪದರ ನಂಬಿಕೆಯಾಗಿದೆ. ವಿಜಯನಗರಕ್ಕೆ ಇಲ್ಲಿನ ಅಧಿದೇವತೆಯಾದ ವಿರೂಪಾಕ್ಷನೆ ಒಡೆಯನಾಗಿದ್ದಾನೆ. ಇವನ ಹೆಸರಿನಲ್ಲಿಯೇ ಅರಸರು ಶಾಸನಗಳು ಹೊರಡಿಸಿರುವುದನ್ನು ಕಾಣಬಹುದು ಎಂದರು.

ಪ್ರಾಧ್ಯಾಪಕರಾದ ಡಾ.ಎಸ್.ವೈ. ಸೋಮಶೇಖರ್, ಜಮಖಂಡಿಯ ಪ್ರಾಧ್ಯಾಪಕರಾದ ಡಾ.ಮಂಜುನಾಥ ಎಸ್.ಪಾಟೀಲ್, ಶ್ರೀನಿವಾಸ ಕಟ್ಟಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net