

ಹೊಸಪೇಟೆ: ಹಿರಿಯರಾದ ಸಾಹಿತಿಗಳಾದ ಪ್ರೊ.ಹಂಪನಾ, ಕಮಲಾ ಹಂಪನಾ ಅವರು ಸಾಹಿತ್ಯ ವಲಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.
ಕಮಲಾ ಹಂಪನಾ ಅವರ ನಿಧನದ ಹಿನ್ನೆಲೆ ಕನ್ನಡ ವಿವಿಯ ಭುವನ ವಿಜಯ ಸಭಾಂಗಣದಲ್ಲಿ ಸೋಮವಾರ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದರು.
ಕಮಲಾ ಹಂಪನಾ ಅವರು ಹಲವಾರು ಪುಸ್ತಕ, ಕವನ ಸಂಕಲನ, ಕಥೆ, ಕವಿತೆ, ಮತ್ತು ಕಾದಂಬರಿ ಸಂಶೋಧನಾ ಗ್ರಂಥಗಳನ್ನು ಸಂಪಾದಿಸಿದ್ದಾರೆ. ರಾಜ್ಯ ಹಾಗೂ ರಾಷ್ಟçಮಟ್ಟದ ಪ್ರಶಸ್ತಿಗಳನ್ನು ಸಹ ಪಡೆದುಕೊಂಡಿದ್ದಾರೆ. ಕನ್ನಡ ವಿವಿಯ ಜತೆಗೆ ನಿಕಟ ಸಂಪರ್ಕವನ್ನು ಹೊಂದಿದವರಾಗಿದ್ದರು. ಜೈನ ಸಾಹಿತ್ಯದ ಬಗ್ಗೆ ತುಡಿತ ಹೊಂದಿದ ಮಹಿಳೆಯರ ಸಾಲಿನಲ್ಲಿ ಒಬ್ಬ ಲೇಖಕಿಯನ್ನು ನಾವು ಕಳೆದುಕೊಂಡAತಾಗಿದೆ ಎಂದರು.
ಹಲವಾರು ಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಆಕಾಶವಾಣಿ ನಾಟಕರೂಪಕಗಳಲ್ಲಿ ಪ್ರಸಿದ್ಧಿಯನ್ನು ಸಹ ಪಡೆದಿದ್ದರು. ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಆಗಿದ್ದರು. 1998ರಲ್ಲಿ ಕನ್ನಡ ವಿವಿಯ ನಾಡೋಜ ಪುರಸ್ಕಾರವನ್ನು ಕೊಟ್ಟು ಗೌರವಿಸಿತ್ತು. ನಾಡಿನಲ್ಲಿ ಕ್ರಿಯಾಶೀಲ ಮಹಿಳೆಯಾಗಿ ಕನ್ನಡದ ಉತ್ತಮ ಬರಹಗಾರ್ತಿಯಾಗಿ ಇವರು ಮುಂಚೂಣಿಯಲ್ಲಿದ್ದರು ಎಂದರು.
ಕುಲಸಚಿವ ಡಾ.ವಿಜಯ ಪೂಣಚ್ಚ ತಂಬಂಡ ಇದ್ದರು.