ಹಾಲುಮತ ಜಾತಿಯಲ್ಲ ಅದೊಂದು ಸಮುದಾಯ

09 MANJU 01
Published on

ಹೊಸಪೇಟೆ: ಹಾಲುಮತ ಬರೀ ಜಾತಿಯಲ್ಲ ಅದೊಂದು ಸಮುದಾಯ, ವಿಶಿಷ್ಟ ಸಂಸ್ಕöÈತಿ, ವೈವಿಧ್ಯಮಯ ಆಚರಣೆ, ಸಂಪ್ರದಾಯಗಳನ್ನು ಹೊಂದಿರುವ ನಾಡಿನ ಸಂಸ್ಕöÈತಿಕ ಪ್ರತೀಕವಾಗಿದೆ ಎಂದು ಕನ್ನಡ ವಿವಿಯ ಹಸ್ತಪ್ರತಿಶಾಸ್ತç ವಿಭಾಗದ ಸಂಶೋಧನಾರ್ಥಿ ನಿಂಗರಾಜ ಉಳ್ಳಾಗಡ್ಡಿ ಅಭಿಪ್ರಾಯಪಟ್ಟರು.

ಕನ್ನಡ ವಿವಿಯ ಹಾಲುಮತ ಅಧ್ಯಯನ ಪೀಠದಲ್ಲಿ ಹಾಲುಮತ ಸಾಂಸ್ಕöÈತಿಕ ಪದಕೋಶ : ಸ್ವರೂಪ ಮತ್ತು ಆಶಯ ಎಂಬ ಉಪನ್ಯಾಸದಲ್ಲಿ ಮಾತನಾಡಿದರು. ಹಾಲುಮತ ಸಮುದಾಯದವರು ಸದಾ ನಿಸರ್ಗದಲ್ಲಿದ್ದು, ಸಾಹಿತ್ಯ, ಸಂಸ್ಕöÈತಿ, ಕಲೆ ಹಾಗೂ ಹಬ್ಬ ಆಚರಣೆಗಳಿಗೆ ತಮ್ಮದೇ ಕೊಡುಗೆ ನೀಡಿದೆ. ಇದು ಸಾಮಾಜಿಕ ಪ್ರಜ್ಞೆಗೆ ನಿದರ್ಶನಗಳಲ್ಲಿ ಒಂದು ಎನ್ನುವಂತೆ ಬೆಳೆದು ಬಂದಿದೆ ಎಂದರು.

ಹಾಲುಮತ ಅಧ್ಯಯನ ಪೀಠದ ಸಂಚಾಲಕ ಡಾ.ಎಫ್.ಟಿ.ಹಳ್ಳಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುರುಬ ಸಮುದಾಯ ಪದಕೋಶವನ್ನು ರಚಿಸುವ ಅವಶ್ಯಕತೆ ಇದೆ. ಸಮುದಾಯದ ಚರಿತ್ರೆ ನಿರ್ಮಾಣ ಆಗಬೇಕಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಅನೇಕ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net