ಕನ್ನಡ ವಿವಿಗೆ ತುರ್ತು ಅನುಧಾನ ನೀಡಿ

Published on

ಹೊಸಪೇಟೆ: ಕನ್ನಡ ವಿವಿಗೆ ತುರ್ತು ಅನುದಾನ ಬಿಡುಗಡೆಗೆ ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿಯ ಪದಾಧಿಕಾರಿಗಳಿಂದ ಶಾಸಕ ಎಚ್.ಆರ್.ಗವಿಯಪ್ಪ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು.

ಕನ್ನಡ ವಿವಿಯಯು ನಾಡಿನ ಮುಕುಟವಾಗಿದೆ. ದೇಶದಲ್ಲೆ ಅಪರೂಪವಾದ ಸಂಶೋಧನಾ ವಿವಿಯಾಗಿದೆ, ಕನ್ನಡ, ಕನ್ನಡಿಗರ ಪ್ರಜ್ಞೆಯನ್ನು ವಿಶ್ವ ಪ್ರಜ್ಞೆಯಾಗಿಸುವತ್ತ ತನ್ನ ಸತ್ವ ಸತ್ವದೊಡನೆ ವಿಶ್ವಪ್ರಜ್ಞೆಯಾಗಿ ಆಡಳಿತ ನಡೆಸಬೇಕೆಂಬ ಗುರಿಗಾಗಿ ವಿವಿ ಸ್ಥಾಪಿಸಲಾಗಿದೆ. ವಿವಿ ಪ್ರಸ್ತುತ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಹೊರಗುತ್ತಿಗೆ ಕಾರ್ಮಿಕರಿಗೆ ಕಳೆದ ಒಂದು ವರ್ಷದಿಂದ ವೇತನ ಪಾವತಿ ಮಾಡಿಲ್ಲ. ಕಮಲಾಪುರ ಪುರಸಭೆಗೆ ತೆರಿಗೆ ಕಟ್ಟದೆ, ಕುಡಿವ ನೀರಿನ ಸಮರ್ಪಕ ಸರಬರಾಜು ಇಲ್ಲದೆ, ವಿವಿಯ ಮಾನ ಹರಾಜು ಹಾಕಿಸಿಕೊಂಡಿದೆ. ವಿವಿಯ ವಿದ್ಯುತ್ ಬಿಲ್ ಕಟ್ಟದೆ ಕತ್ತಲಿನಲ್ಲಿರುವ ಹೀನ ಪರಿಸ್ಥಿತಿಯಾಗಿದೆ.

ಕಳೆದ ತಿಂಗಳು ಆಡಳಿತ ಮಂಡಳಿ ಕಳೆದ 20 ವರ್ಷಗಳಿಂದಲೂ ದಿನಗೂಲಿಗಳಾಗಿ, ಹೊರಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದ 47 ಸಿಬ್ಬಂಧಿಯನ್ನು ಕೆಲಸದಿಂದ ತಗೆದು ಹಾಕಲಾಗಿದೆ. ಸರ್ಕಾರದಿಂದ ಅನುದಾನ ಬರುತ್ತಿಲ್ಲ. ಇದರಿಂದ ವೇತನ ನೀಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಎಲ್ಲಾ ಹೊರಗುತ್ತಿಗೆ ಕಾರ್ಮಿಕರನ್ನು ತೆಗೆಯುವುದು ಅನಿವಾರ್ಯವಾಗಿದೆ ಎಂಬುದಾಗಿ ಆಡಳಿತ ಮಂಡಳಿ ಕಾರಣ. ಇಂತಹ ಕೆಟ್ಟ ಪರಿಸ್ಥಿತಿ ವಿವಿಗೆ ಬರಬೇಕೆಂಬ ಉದ್ದೇಶದಿಂದಲೇ ಕನ್ನಡ ದ್ರೋಹಿ ರಾಜಕಾರಣಿ, ಅಧಿಕಾರಿಗಳಿಂದ, ಭೂಗಳ್ಳರಿಂದ ಸೃಷ್ಟಿಸಲ್ಪಟ್ಟ ಸಮಸ್ಯೆಯಾಗಿದೆ. ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಕನಿಷ್ಟ ಐದು ಕೋಟಿ ರೂಪಾಯಿಗಳ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಿ, ಕೆಲಸ ಕಳೆದುಕೊಳ್ಳುತ್ತಿರುವ ಕಾರ್ಮಿಕರ ಪ್ರಾಣ ರಕ್ಷಿಸಬೇಕಿದೆ ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net