ಏಕತೆಯೇ ಪ್ರಜಾಪ್ರಭುತ್ವಕ್ಕೆ ಜೀವಾಳ

31 MANJU 02
Published on

ಹೊಸಪೇಟೆ: ಭಾರತ ಅನೇಕ ರಾಜ್ಯಗಳ, ವಿವಿಧ ಧರ್ಮ, ಭಾಷೆ, ಸಂಸ್ಕöÈತಿಗಳ ನೆಲೆಯಾಗಿದ್ದರೂ ನಾವೆಲ್ಲರೂ ಒಂದೇ ಎಂಬ ಭಾವನೆಯು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಯಶಸ್ವಿಗೆ ಕಾರಣವಾಗಿದೆ ಎಂದು ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಎಂದರು.

ಕನ್ನಡ ವಿವಿಯ ಕ್ರಿಯಾಶಕ್ತಿಯ ಸಿಂಡಿಕೇಟ್ ಸಭಾಂಗಣದಲ್ಲಿ ಗುರುವಾರ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 149ನೇ ಜನ್ಮ ದಿನಾಚರಣೆ ನಿಮಿತ್ತ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ನಮ್ಮಲ್ಲಿನ ಒಗ್ಗಟ್ಟಿನ ಕೊರತೆಯ ಕಾರಣದಿಂದಲೇ ಭಾರತ ಅನೇಕ ವರ್ಷಗಳ ಕಾಲ ವಿದೇಶಿಯರ ಆಳ್ವಿಕೆಗೆ ಒಳಪಟ್ಟಿತು. ಹೀಗಾಗಿ ನಾವೆಲ್ಲರೂ ಒಗ್ಗಟ್ಟಾಗಿರಬೇಕು ಎಂದರು.

ದೇಶದಲ್ಲಿ ರಾಜ್ಯಗಳು ಸ್ವತಂತ್ರವಾಗಿದ್ದರೂ ಪ್ರಬಲ ಕೇಂದ್ರ ಸರ್ಕಾರದಿಂದ ನಿಯಂತ್ರಣಕ್ಕೆ ಒಳಪಟ್ಟು ಅಖಂಡತೆಯನ್ನು ಉಳಿಸಿಕೊಂಡಿದೆ. ಸ್ವಾತಂತ್ರö್ಯದ ನಂತರದಲ್ಲಿ ಅಸ್ತಿತ್ವದಲ್ಲಿದ್ದ 562 ಸಂಸ್ಥಾನಗಳನ್ನು ಒಗ್ಗೂಡಿಸಿ ಅಖಂಡ ಭಾರತ ಕಟ್ಟುವಿಕೆಯಲ್ಲಿ ವಲ್ಲಭಭಾಯ್ ಪಟೇಲ್ ಅವರ ಪರಿಶ್ರಮವೇ ಅವರ ಜನ್ಮದಿನವನ್ನು ರಾಷ್ಟಿçÃಯ ಏಕತಾ ದಿನ ಎಂದು ಆಚರಿಸಲು ಸ್ಫೂರ್ತಿ ಆಗಿದೆ ಎಂದರು.

ಕನ್ನಡ ವಿವಿಯ ಆಡಳಿತಾಂಗದ ಉಪಕುಲಸಚಿವ ಡಾ.ಎ.ವೆಂಕಟೇಶ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಅಧ್ಯಯನಾಂಗದ ಮುಖ್ಯಸ್ಥ ಡಾ.ಅಮರೇಶ ಯತಗಲ್, ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ, ಡಾ.ಈ.ರ‍್ರಿಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net