ತಿಂಡಿಗೆ ಬಂದ ತುಂಡೇರಾಯ ನಾಟಕ ಪ್ರದರ್ಶನ

14 MANJU 07
Published on

ಹೊಸಪೇಟೆ: ಕನ್ನಡ ವಿವಿಯ ಶ್ರೀರಂಗ ದತ್ತಿನಿಧಿ ಮತ್ತು ನಾಟಕ ವಿಭಾಗದಿಂದ ಭುವನ ವಿಜಯ ಸಭಾಂಗಣದಲ್ಲಿ  ಶುಕ್ರವಾರ ಏರ್ಪಡಿಸಿದ್ದ ತಿಂಡಿಗೆ ಬಂದ ತುಂಡೇರಾಯ ನಾಟಕ ಪ್ರದರ್ಶನ ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ತಮಟೆ ಬಾರಿಸುವುದರ ಮೂಲಕ ಚಾಲನೆ ನೀಡಿದರು.

ಶ್ರೀರಂಗ ದತ್ತಿನಿಧಿಯ ಸಂಚಾಲಕ ಡಾ.ವೀರೇಶ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ, ಎರಡನೇ ಪ್ರಪಂಚ ಯುದ್ದಕ್ಕು ಮೊದಲು ಜರ್ಮನಿಯಲ್ಲಿ ಅಡಾಲ್ಟ್ ಹಿಟ್ಲರ್ ಮತ್ತು ನಾಝಿ ಪಕ್ಷದ ಬೆಳವಣಿಗೆಯ ಸಂಕೇತವಾಗಿ ಹುಟ್ಟಿದ ವಿಡಂಬನಾತ್ಮಕ ನಾಟಕ. ಆ ನಾಟಕದ ಎಲ್ಲ ಪಾತ್ರಗಳು ಹಾಗೂ ಘಟನೆಗಳು ನಾಝಿ ಜರ್ಮನಿಯ ಇತಿಹಾಸದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿವೆ ಎಂದರು.

ಲಲಿತಕಲಾ ನಿಕಾಯದ ಡೀನ್ ಡಾ.ಶಿವಾನಂದ ಎಸ್.ವಿರಕ್ತಮಠ, ಭಾಷಾ ನಿಕಾಯದ ಡೀನ್ ಡಾ.ಎಫ್.ಟಿ.ಹಳ್ಳಿಕೇರಿ, ವಿಜ್ಞಾನ ನಿಕಾಯದ ಡೀನ್ ಡಾ.ಶೈಲಜಾ ಇಂ.ಹಿರೇಮಠ ಇತರÀರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net