ಕನ್ನಡ ವಿವಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

27 MANJU 02
Published on

ಹೊಸಪೇಟೆ: ಅಂತಾರಾಷ್ಟಿçÃಯ ಭಾಷಾಂತರ ದಿನಾಚರಣೆಯ ನಿಮಿತ್ತ ಕನ್ನಡ ವಿವಿಯಲ್ಲಿ ವಿವಿಯ ತೋಟಗಾರಿಕೆ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದೊಂದಿಗೆ ಗುರುವಾರ ಮತ್ತು ಶುಕ್ರವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ವಿಭಾಗದ ಮುಖ್ಯಸ್ಥ ಡಾ.ಎ.ಮೋಹನ ಕುಂಟಾರ್ ಮಾತನಾಡಿ, ಸಾರ್ವ ಜನಿಕರು ಕಾಲೇಜಿನ ಆವರಣ ಸ್ವಚ್ಛವಾ ಗಿಡಲು ಸಹಕರಿಸಬೇಕು. ಪ್ರತಿಯೊಬ್ಬರು ಸ್ವ-ಇಚ್ಛೆಯಿಂದ ಸ್ವಚ್ಛತಾ ಕಾರ್ಯ ಕ್ರಮದಲ್ಲಿ ಭಾಗವಹಿಸಬೇಕು. ಸ್ವಚ್ಛತಾ ಕೆಲಸಗಳು ಒಂದು ದಿನಕ್ಕೆ ಸೀಮಿತವಾಗಬಾರದು. ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡುವಂತೆ ಸಾರ್ವಜನಿಕರನ್ನು ಪ್ರೇರೇಪಿಸಬೇಕು ಎಂದರು.

ಐಕ್ಯುಎಸಿ ಉಪನಿರ್ದೇಶಕಿ ಪ್ರಭಾ, ಸ್ಥಾನಿಕಾಧಿಕಾರಿ ನಾಗವೇಣಿ, ಗಂಗಾಧರ, ನಿಂಗಪ್ಪ, ಸಂಶೋಧನಾರ್ಥಿಗಳಾದ ಬರ‍್ಗಿ ಜಯಶ್ರೀ, ಕೆ.ಅನಂತ, ಶ್ವೇತಾ ಬಾಳಿ, ಜೆ.ಎಂ.ವಿನೀತಾ, ರೇಬೆಕಾ ಥಾಮಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net