

ಹೊಸಪೇಟೆ: ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಎನ್‌ಡಿಟಿ ಪರೀಕ್ಷೆ ನಡೆಸಲು ಚೆನ್ನೈನ ಸ್ಟ್ರಕ್ಚರಲ್ ಇಂಜಿನಿಯರಿಂಗ್ ರಿಸರ್ಚ್ ಸೆಂಟರ್‌ನ (ಸಿಎಸ್‌ಐಆರ್) ಪರಿಣತರ ತಂಡ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಎಲ್ಲ 33 ಗೇಟುಗಳನ್ನು ಬದಲಿಸಿ ಹೊಸದಾಗಿ ಅಳವಡಿಕೆ ಸಂಬಂಧಿಸಿ ಈಚೆಗೆ ಡ್ಯಾಂಗೆ ಭೇಟಿ ನೀಡಿದ್ದ ರಾಷ್ಟ್ರೀಯ ಜಲಾಶಯ ಸುರಕ್ಷತಾ ಪ್ರಾಧಿಕಾರ ಅಧ್ಯಕ್ಷ ಅನಿಲ್ ಜೈನ್ ತಂಡದ ಸಲಹೆಯಂತೆ ಜಲಾಶಯದ ಗಟ್ಟಿತನ ಪರೀಕ್ಷಿಸಲು ನಾನ್ ಡಿಸ್ಟ್ರಕ್ಟಿವ್ ಟೆಸ್ಟಿಂಗ್ (ಎನ್‌ಡಿಟಿ)ಗಾಗಿ ತಮಿಳುನಾಡಿನ ಸಿಎಸ್‌ಐಆರ್ ಪ್ರಧಾನ ವಿಜ್ಞಾನಿ ಡಾ.ಎಚ್.ಎನ್.ಬಾರ್ ನೇತೃತ್ವದಲ್ಲಿ ಐವರ ತಂಡ ದಿನವಿಡೀ ಕ್ರಸ್ಟ್‌ಗೇಟುಗಳನ್ನು ಪರಿಶೀಲನೆ ನಡೆಸಿತು.
ಕೆಲ ದಿನಗಳಲ್ಲಿ ಪರೀಕ್ಷೆ ನಡೆಸಲು ಹಾಗೂ ಅದಕ್ಕೆ ಭರಿಸುವ ವೆಚ್ಚದ ವರದಿಯನ್ನು ಟಿಬಿಬಿ ಆಡಳಿತ ಮಂಡಳಿಗೆ ಈ ತಂಡ ನೀಡಲಿದೆ. ಆ ಬಳಿಕವೇ ಜಲಾಶಯದ ಗೇಟುಗಳನ್ನು ಬದಲಿಸುವ ಬಗ್ಗೆ ಮಂಡಳಿ ಮುಂದಾಗಲಿದೆ. ಟಿಬಿಡ್ಯಾಂ ಕಾರ್ಯದರ್ಶಿ ಒಆರ್‌ಕೆ ರೆಡ್ಡಿ, ಡ್ಯಾಮ್‌ನ ಸ್ಥಾನಿಕಾಧಿಕಾರಿಗಳಾದ ರವಿಚಂದ್ರ, ರಾಘವೇಂದ್ರ ಇತರರಿದ್ದರು.