

ಹೊಸಪೇಟೆ: ನಗರದ ಕೊಟ್ಟೂರು ಸ್ವಾಮಿ ಮಠದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ನಿಮಿತ್ತ ಪೂರ್ವಭಾವಿ ಸಭೆ ಬುಧವಾರ ನಡೆಯಿತು.
ಅಭಿಯಾನದ ಸಂಚಾಲಕ ಬಸವರಾಜ್ ಪಾಟೀಲ್ ವೀರಾಪುರ ಮಾತನಾಡಿ, ನ.06 ರಿಂದ ಶ್ರೀ ಕ್ಷೇತ್ರ ಶೃಂಗೇರಿಯಿAದ ಪ್ರಾರಂಭಗೊಂಡ ಪಾದಯಾತ್ರೆಯೂ ಮೊದಲ ಹಂತದಲ್ಲಿ ಹರಿಹರದವರೆಗೆ ಯಶಸ್ವಿಯಾಗಿದೆ. ಎರಡನೇ ಹಂತದ ಜಲಜಾಗೃತಿ-ಜನಜಾಗೃತಿ ಪಾದಯಾತ್ರೆ ಆರಂಬವಾಗಿದೆ. ಡಿ.27ರಂದು ಪಾದಯಾತ್ರೆ ಮೂಲಕ ನಗರಕ್ಕೆ ಬರುತ್ತಾರೆ. ಇ.30ಕ್ಕೆ ಕಿಷ್ಕಿಂದಾ ತಲುಪಲಿದೆ. ಗಂಗಾವತಿಯ ವಿವಿಧ ಸಂಘಟನೆಗಳು, ಸರ್ವ ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ಡಿ.30 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಸಿ.ಬಿ.ಎಸ್. ವೃತ್ತದಿಂದ ಜಲಜಾಗೃತಿ ಜಾಥಾ ಚಾಲನೆಗೊಂಡು ಗಾಂಧಿ ವೃತ್ತ ಮಾರ್ಗವಾಗಿ ಜೂನಿಯರ್ ಕಾಲೇಜು ಆವರಣದಲ್ಲಿ ಪಾದಯಾತ್ರೆಯ ಸಮಾರೋಪ ಸಮಾವೇಶ ನಡೆಯಲಿದೆ. ನಿರ್ಮಲ ತುಂಗಭದ್ರಾ ಅಭಿಯಾನ ಬೃಹತ್ ಜಲ ಜಾಗೃತಿ ಜನಜಾಗೃತಿ ಪಾದಯಾತ್ರೆಯಲ್ಲಿ ನಾವೆಲ್ಲರೂ ತನು ಮನದಿಂದ ಹೆಜ್ಜೆ ಹಾಕೋಣ, ಜೀವನದಿಯನ್ನು ಸಂರಕ್ಷಿಸೋಣ ಎಂದರು.
ಶೃಂಗೇರಿಯಿಂದ ಕಿಷ್ಕಿಂದಾ ತನಕ ನದಿಯ ಶುದ್ಧತೆ ಮತ್ತು ಪವಿತ್ರತೆ ಕಾಪಾಡಲು ನಿಶ್ಚಿಯಿಸಿದ್ದು ಇದರ ನಿಮಿತ್ತ ನ.06ರ ಬುಧವಾರದಿಂದ ಬೃಹತ್ ಜಲಜಾಗೃತಿ-ಜನಜಾಗೃತಿ ಪಾದಯಾತ್ರೆ ಪ್ರಾರಂಭಗೊಂಡಿದೆ. ತುಂಗಭದ್ರಾ ನದಿ ಪಾತ್ರದ ಪರಿಸರಾಸಕ್ತರು, ಸಾಧು-ಸಂತರು, ವಿದ್ಯಾರ್ಥಿಗಳು, ರೈತರು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲರೂ ಈ ನಿರ್ಮಲ ತುಂಗಭದ್ರಾ ಅಭಿಯಾನದಲ್ಲಿ ಭಾಗವಹಿಸೋಣ ಎಂದರು.
ಪ್ರಮುಖರಾದ ಪಿ.ವೆಂಕಟೇಶ್, ಗುಜ್ಜಲ್ ಗಣೇಶ್, ಗಂಟೆ ಸೋಮಶೇಖರ್, ಮಂಜುನಾಥ, ಗುಂಡಿ ರಾಘವೇಂದ್ರ, ಗುಂಡಿ ರಮೇಶ್, ದಾದಾಖಲಂದರ್, ಮಲ್ಲಿಕಾರ್ಜುನ ಮೇಟಿ ಇತರರಿದ್ದರು.