ಕ್ಷಯ ಮುಕ್ತ ಜಿಲ್ಲೆಗೆ ಸಂಕಲ್ಪ ಮಾಡಿ

24 MANJU 01
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:8; brp_del_th:0.0316,0.0001; brp_del_sen:0.1000,0.1000; motionR: 0; delta:1; bokeh:1; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 261.0464;aec_lux_index: 0;albedo: ;confidence: ;motionLevel: -1;weatherinfo: null;temperature: 36;
Published on

ಹೊಸಪೇಟೆ: ಕ್ಷಯ ರೋಗಕ್ಕೆ ಹೇದರುವ ಅವಶ್ಯಕತೆ ಇಲ್ಲಾ ವೈದ್ಯರು ಹೇಳಿದ ರೀತಿಯಲ್ಲಿ ಸರಿಯಾದ ಚಿಕಿತ್ಸೆ ಪಡೆದಲ್ಲಿ ಕ್ಷಯವನ್ನು ನಿರ್ಮೂಲನೆ ಮಾಡಬಹುದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಘಟಕದಿಂದ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ್ಷಯ ಮುಕ್ತ ನಿರ್ಮೂಲನೆಯಲ್ಲಿ ಕರ್ನಾಟಕ ದಕ್ಷಿಣ ಭಾರತದಲ್ಲಿ ಎರಡನೇ ಸ್ಥಾನದಲ್ಲಿದೆ. ಎಚ್.ಐ.ವಿ ರೋಗಿಗಳಲ್ಲಿ ಹೆಚ್ಚು ಕಂಡು ಬರುತ್ತಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವರಿಗೆ ಈ ರೋಗ ಬರುತ್ತದೆ. ಆದ್ದರಿಂದ ದೇಹದಲ್ಲಿ ಪೋಷಕಾಂಶ ಹೆಚ್ಚಿಸಿದರೆ, ರೋಗಗಳಲ್ಲು ಸುಳಿಯಲ್ಲ. ಕ್ಷಯ ರೋಗಕ್ಕೆ ಹೆದರುವ ಅವಶ್ಯಕತೆ ಇಲ್ಲ, ಈಗ ವಿಜ್ಞಾನ ಮುಂದುವರೆದಿದ್ದು ಎಲ್ಲಾ ರೀತಿಯ ಚಿಕಿತ್ಸೆಗಳು ಲಭ್ಯವಿದೆ ಅದರಂತೆ ವೈದ್ಯರು ತಿಳಿಸಿದ ರೀತಿಯಲ್ಲಿ ಪ್ರಾರಂಭ ಹಂತದಲ್ಲಿ ಚಿಕಿತ್ಸೆಯನ್ನು ಪಡೆದರೆ ರೋಗವನ್ನು ಗುಣಮುಖ ಮಾಡಬಹುದು, ಕ್ಷಯ ಮುಕ್ತ ಜಿಲ್ಲೆಯನ್ನಾಗಿ ಮಾಡಲು ವೈದ್ಯರುಗಳು ಶ್ರಮಪಡುತ್ತಿದ್ದಾರೆ ಎಂದರು.

ಕ್ಷಯ ರೋಗ ಗುಣಪಡಿಸಲು ರಾಜ್ಯ ಸರ್ಕಾರ ಉಚಿತ ಚಿಕಿತ್ಸ ನೀಡುತ್ತಿದೆ. 2025ರ ಒಳಗೆ ನಿರ್ಮೂಲನೆ ಸರ್ಕಾರ ಸಂಕಲ್ಪ ಮಾಡಿದ್ದು, ಪ್ರತಿಯೊಬ್ಬರ ಸಹಕಾರ ಅಗತ್ಯ. ಜಿಲಗಲೆಯಲ್ಲಿ 137 ಗ್ರಾಮ ಪಂಚಾಯಿತಿಯಲ್ಲಿ ನಾಲ್ಕು ಗ್ರಾಮಾ ಪಂಚಾಯಿತಿ ಕ್ಷಯ ಮುಕ್ತವಾಗಿವೆ. ಶೇ.84 ರಷ್ಟು ಗುಣ ಮುಖರಾಗಿದ್ದಾರೆ. ಸರ್ಕಾರದ ಜತೆ ಪ್ರತಿಯೊಬ್ಬರು ಕ್ಷಯ ಮುಕ್ತ ಜಿಲ್ಲೆಗೆ ಸಂಕಲ್ಪ ಮಾಡಬೇಕಿದೆ ಎಂದರು.

ಸೀತಾರಾಮ ತಾಂಡ, ಹಗರಿಬೊಮ್ಮನಹಳ್ಳಿ ತಾಲೂಕಿನ ಹನ್ಸಿ, ಮಾಲವಿ, ಹೂವಿನಹಡಗಲಿ ಹ್ಯಾರಡ ಗ್ರಾಮ ಪಂಚಾಯಿತಿಗಳಿಗೆ ಕ್ಷಯರೋಗ ಮುಕ್ತ ಗ್ರಾಮ ಎಂದು ಘೋಷಣೆ ಮಾಡಿ ಗೌರವಿಸಿದರು.

ಡಿ.ಎಚ್.ಒ. ಶಂಕರ್ ನಾಯ್ಕ, ಹುಡಾ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಆರ್‌ಸಿಎಚ್ ಜಂಬಯ್ಯನಾಯಕ, ಟಿಎಚ್‌ಒ ಬಸವರಾಜ್, ಷಣ್ಮುಖ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net