ಕ್ಷಯರೋಗ ತಡೆಗೆ ವ್ಯಧ್ಯರ ಸಹಕಾರ ಅಗತ್ಯ

27 MANJU 02
Published on

ಹೊಸಪೇಟೆ: ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರದಿAದ ಇಲ್ಲಿನ ತಾಲೂಕು ಅರೋಗ್ಯಧಿಕಾರಿಗಳ ಕಚೇರಿ ಆವರಣದಲ್ಲಿ ಕ್ಷಯರೋಗದ ಬಗ್ಗೆ ಖಾಸಗಿ ಆಸ್ಪತ್ರೆಗಳಲ್ಲಿ ಕ್ಷಯರೋಗದ ಅರಿವು ಮೋಡಿಸುವ ಕಾರ್ಯಕ್ರಮ ನಡೆಯಿತು.

ಡಿಎಚ್‌ಒ ಡಾ.ಬಸವರಾಜ್ ಮಾತನಾಡಿ, 2025ರ ವೇಳೆಗೆ ಕ್ಷಯಮುಕ್ತ ಭಾರತ ಮಾಡಲು ಗುರಿ ಇದೆ. ಆದ್ದರಿಂದ ಸರ್ಕಾರಿ ಮಾತ್ರವಲ್ಲದೇ ಖಾಸಗಿ ವ್ಯದ್ಯರು ಕೂಡ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಅರೋಗ್ಯ ಶಿಕ್ಷಣಧಿಕಾರಿ ದೊಡ್ಡಮನಿ ಮಾತನಾಡಿ, ಆಸ್ಪತ್ರೆಗೆ ಬರುವ ಸಾರ್ವಜನಿಕರು ಕ್ಷಯರೋಗದ ಲಕ್ಷಣಗಳ ಅರಿವು ಮೂಡಿಸಬೇಕಿದೆ. ಎರಡು ವಾರಕಿಂತ ಹೆಚ್ಚು ಕೆಮ್ಮು. ಕಫದಲ್ಲಿ ರಕ್ತ ಬೀಳುವುದು. ಕ್ರಮೇಣ ತುಕಾ ಕಡಿಮೆ ಆಗುವುದು. ಹಸಿವು ಅಗೆದೆ ಇರುವುದು. ರಾತ್ರಿವೇಳೆಯಲ್ಲಿ ಬೆವರುವುದು. ಎದೆಯಲ್ಲಿ ನೋವು ಬರುವುದು. ಸಂಜೆ ವೇಳೆಯಲ್ಲಿ ಜ್ವರ ಬರುವುದು. ಕಂಕುಳಲ್ಲಿ ಗಡ್ಡೆ, ಗಂಟಲಲ್ಲಿ ಗಡ್ಡೆ ಸೇರಿದಂತೆ ಇತರೆ ಲಕ್ಷಣಗಳು ಕಂಡು ಬಂದರೆ ಸ್ಟೇಪ್ಸ್ (ಸಿಸ್ಟಮ್ ಫಾರ್ ಟಿಬಿ ಎಲ್ಲಿಮಿನೇಷನ್ ಇನ್ ದಿ ಪ್ರೈವೇಟ್ ಸೆಕ್ಟರ್) ನಲ್ಲಿ ಖಾಸಗಿ ವ್ಯದ್ಯರು ಅಥವಾ ಸಿಬ್ಬಂದಿಯವರು ನೀಕ್ಷಯ ಆಪ್ ನಲ್ಲಿ ಪ್ರಾರಂಭ ದಿಂದ ಕೊನೆಯವರೆಗೂ ಅಪ್ಡೇಟ್ ಮಾಡಬೇಕು. ಕ್ಷಯರೋಗದ ಮಾಹಿತಿಯನ್ನು ಸರ್ಕಾರಿ ಇಲಾಖೆಗೆ ಕೊಡಬೇಕು. ಆದ್ದರಿಂದ ವಿಜಯನಗರ ಜಿಲ್ಲೆಯನ್ನು ಕ್ಷಯಮುಕ್ತ ಮಾಡಲು ಖಾಸಗಿ ವ್ಯದ್ಯರು ಕೈ ಜೋಡಿಸಬೇಕು ಎಂದರು.

ಕ್ಷಯ ಅಂತ ದೃಡಪಟ್ಟರೆ ಆಪ್ತ ಸಮಾಲೋಚನೆ ಮಾಡಿ ಉಚಿತವಾಗಿ ಮಾತ್ರೆ ನೀಡಲಾಗುತ್ತದೆ. ಜತೆಗೆ ನಿಕ್ಷಯ ಪೋಷನ್ ಯೋಜನೆ ಅಡಿಯಲ್ಲಿ ಪೌಷ್ಟಿಕ ಆಹಾರ ಸೇವನೆಗಾಗಿ ಪ್ರತಿ ತಿಂಗಳ 500 ರಂತೆ ಆರು ತಿಂಗಳ ವರಿಗೆ ತಮ್ಮ ಖಾತೆಗೆ ಹಾಕಲಾಗುವುದು ಎಂದರು.

ತಾಲೂಕು ಬಿ.ಪಿ.ಎಂ. ಕವಿತ, ಕ್ಷಯರೋಗ ಮೇಲ್ವಿಚಾರಕ ಕಾಸಿಮ್ ಸಾಬ್, ತಾಲೂಕು ಹಿರಿಯ ಅರೋಗ್ಯ ನೀರಕ್ಷಣ ಅಧಿಕಾರಿ ನಾಗೇಂದ್ರಪ್ಪ, ಪ್ರಮುಖರಾದ ಶ್ರೀದೇವಿ, ಟಿ.ಬಿ.ಎಚ್ ವಿ.ಸರಸ್ವತಿ, ರಾಧಾ, ಕಾಸಿಂಬಿ, ಮೌಲಾಲಿ ಇತರರಿದ್ದರು,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net