

ಹೊಸಪೇಟೆ: ಟ್ರಕ್ ಟರ್ಮಿನಲ್ 37 ಎಕರೆ ವಿಸ್ತೀರ್ಣ ಹೊಂದಿದ್ದು, ಅದರಲ್ಲಿ 20 ಎಕರೆಗೂ ಅಧಿಕ ಜಾಗದಲ್ಲಿ ಟ್ರಕ್ ಟರ್ಮಿನಲ್ ಡೆವಲಪ್ಟೆಂಟ್ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದ ಹೊರವಲಯದ ಎನ್‌ಎಚ್ 50ರಲ್ಲಿ ನಿರ್ಮಾಣಗೊಂಡಿರೋ ನೂತನ ಡಿ.ದೇವರಾಜು ಅರಸು ಟ್ರಕ್ ಟರ್ಮಿನಲನ್ನು ಉದ್ಘಾಟನೆ ಮಾಡಿದರು.
ರಾಜ್ಯದ ಮೂರನೇ ಅತಿ ದೊಡ್ಡ ಟರ್ಮಿನಲ್ ಇದಾಗಿದ್ದು, ಚಿತ್ರದುರ್ಗ, ವಿಜಯನಗರ, ಗದಗ, ಹುಬ್ಬಳ್ಳಿ ಸೇರಿ ಬೇರೆ ಬೇರೆ ಭಾಗಕ್ಕೆ ರಾಷ್ಟ್ರೀಯ ಹೆದ್ದಾರಿ 50 ಸಂಪರ್ಕ ಕಲ್ಪಿಸುತ್ತದೆ. ರಾಷ್ಟಿçÃಯ ಹೆದ್ದಾರಿಯಲ್ಲಿ ಹತ್ತಾರು ಅಪಘಾತಗಳು ಆಗುತ್ತದೆ. ಅದನ್ನ ತಪ್ಪಿಸಲು ಲಾರಿ ಡ್ರೈವರ್‌ಗಳು, ಕ್ಲೀನರ್‌ಗಳಿಗೆ ಅನುಕೂಲ ಆಗಲಿ. ಉದ್ಘಾಟನಾ ಸಮಾರಂಭದ ಸವಿನೆನಪಿಗಾಗಿ ಮೊದಲ ಒಂದು ತಿಂಗಳು ಉಚಿತ ಬಳಕೆಗೆ ಅನುವು ಮಾಡಲಾಗಿದೆ. ನಂತರ ಸುಸಜ್ಜಿತ ನಿರ್ವಹಣೆಗೆ ನಿಗದಿತ ದರ ಪಾವತಿಸಬೇಕು ಎಂದರು.
ಶಾಸಕ ಎಚ್.ಆರ್.ಗವಿಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಮಾರ್ಗದಲ್ಲಿ ನಿತ್ಯ ನಾಲ್ಕರಿಂದ ಐದು ಸಾವಿರ ಲಾರಿಗಳು ಸಂಚರಿಸುತ್ತವೆ. ಚಾಲಕರು ಪ್ರತಿದಿನ ಪಡುವ ಪಾಡ ಹೇಳತೀರದಾಗಿತು. ಈ ಲಾರಿ ಟರ್ಮಿನಲ್ ದೊಡ್ಡ ಕೊಡುಗೆಯಾಗಿದೆ ಎಂದರು.
ಹುಡಾ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ್ ನಿಯಾಜಿ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಜಿಪಂ ಸಿಇಒ ನೊಂಗ್ಜಾಯ್ ಅಕ್ರಮ್ ಅಲಿ ಷಾ, ಎಸ್ಪಿ ಬಿ.ಎಲ್.ಶ್ರೀಹರಿಬಾಬು, ಡಿ.ದೇವರಾಜ್ ಅರಸ್ ಟ್ರಕ್ ಟರ್ಮಿನಲ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್, ಲಾರಿ ಅಸೋಶಿಯೇಷನ್ ಅಧ್ಯಕ್ಷ ಷಣ್ಮುಖಪ್ಪ ಇತರರಿದ್ದರು.