

ಹೊಸಪೇಟೆ: ತಾಲೂಕಿನ ಸೀತಾರಾಂ ತಾಂಡದ ಹೊರ ವಲಯದಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು, ಜನರ ಕೂಗಾಟಕ್ಕೆ ಮರವೇರಿ ಕುಳಿತ ಘಟನೆ ಭಾನುವಾರ ನಡೆದಿದೆ.
ಸೀತಾರಾಂ ತಾಂಡಾದ ಹೊರವಲಯದಲ್ಲಿರುವ ಹಂಪಿ ಪೆಟ್‌ಫಾರ್ಮ್ ಬಳಿ ಕರಡಿ ಕಾಣಿಸಿಕೊಂಡಿದ್ದು, ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರ ಹಿಂದೆಯೆ ಕರಡಿ ಬಂದಿದೆ. ಈ ವೇಳೆ ರೈತರು ಕೂಗಾಡಿದ್ದಾರೆ. ಬಳಿಕ ಓಡಿ ಹೋಗಿ ಮರವೇರಿ ಕುಳಿತಿದೆ. ಪದೇ, ಪದೇ ಕಾಣಿಸಿಕೊಳ್ಳುತ್ತಿರುವ ಕರಡಿಗಳಿಗೆ ಕಾಡಿವಾಣ ಹಾಕದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಕಮಲಾಪುರ ಪೊಲೀಸರು, ಹಾಗೂ ಅರಣ್ಯ ಇಲಾಖೆ ದರೋಜಿ ಕರಡಿ ಧಾಮದ ಸಿಬ್ಬಂದಿಗಳು ದೌಡಾಯಿಸಿ ಬಂದು, ಕರಡಿ ಸೆರೆಗೆ ಮುಂದಾಗಿದ್ದಾರೆ. ನಿತ್ಯ ಹೊಲ-ಗದ್ದೆಗಳಲ್ಲಿ ಕೆಲಸ ಮಾಡುತ್ತಿರುವ ರೈತರಿಗೆ ಕರಡಿ ಕಾಟ ಹೆಚ್ಚಾಗಿ, ಆತಂಕದಲ್ಲಿದ್ದಾರೆ. ಕಬ್ಬು ಸೇರಿದಂತೆ ಇತರೆ ಬೆಳೆಗಳನ್ನು ಕರಡಿ ನಾಶ ಪಡಿಸುತ್ತಿರುವ ಕರಡಿಗಳ ಕಡಿವಾಣ ಹಾಕಲು ಅರಣ್ಯ ಇಲಾಖೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.