

ಹೊಸಪೇಟೆ: ಇಲ್ಲಿನ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ವತಿಯಿಂದ ಪ್ರಾರಂಭಿಸಿರುವ ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರಕ್ಕೆ ಸಲಕರಣೆ, ಕಟ್ಟಡ ಹಾಗೂ ಮೂಲಭೂತ ಸೌಕರ್ಯಕ್ಕಾಗಿ ಅನುದಾನ ನೀಡಬೇಕು ಎಂದು ಒತ್ತಾಯಿಸಿ ನಗರಕ್ಕೆ ಭೇಟಿ ನೀಡಿದ ಸಂಸದ ಈ.ತುಕಾರಂ ಆಡಳಿತ ಮಂಡಳಿಯಿAದ ಮನವಿ ಸಲ್ಲಿಸಲಾಯಿತು.
ಸಮಸ್ತ ಸಮುದಾಯದ ಅಭಿವೃದ್ಧಿಗಾಗಿ ಹಲವು ವರ್ಷಗಳಿಂದ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯಿಂದ ಸಾಮಾಜಿಕ, ಶೈಕ್ಷಣಿಕ, ಅರ್ಥಿಕ ಅಭಿವೃಧ್ದಿಗಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇಲ್ಲಿನ ಅಜಾದ್ ನಗರದಲ್ಲಿ ಯುವಕ ಯುವತಿಯರಿಗೆ ಜೀವನಾಧಾರಿತ ಕೌಶಲ್ಯ ತರಬೇತಿ ನೀಡಲು ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಕಟ್ಟಡ, ಸಲಕರಣೆ ಮತ್ತು ಮೂಲ ಸೌಕರ್ಯಗಳಿಗೆ ಅಂದಾಜು ಎರಡು ಕೋಟಿ ರೂ. ಅನುದಾನವು ಅಗತ್ಯವಿದೆ. ಸಂಸದರ ಯಾವುದಾದರೂ ಯೋಜನೆ ಅಡಿಯಲ್ಲಿ ಕೇಂದ್ರಕ್ಕೆ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಹುಡಾ ಅಧ್ಯಕ್ಷ ಎಚ್.ಎನ್.ಮೊಹಮ್ಮದ್ ಇಮಾಮ್ ನಿಯಾಜಿ, ಪ್ರಮುಖರಾದ ಬಿ.ಅನ್ಸರ್ ಬಾಷಾ, ಪೀರೋಜ್ ಖಾನ್, ಡಾ.ದರ್ವೇಶ್ ಮೊಹಿದ್ದೀನ್ ಇದ್ದರು.