ಪ್ರವಾಸೋದ್ಯಮ ಪಟ್ಟಿಯಿಂದ ಸಮ್ಮೇದ್ ಶಿಖರ್ಜಿ ಕೈಬಿಡಿ

221222 Hospete Sri Adinath Swetambara Jain Sangh Petition
ಹೊಸಪೇಟೆ ತಹಸೀಲ್ದಾರ್ ಗುರುಬಸವರಾಜಗೆ ಮನವಿ ಸಲ್ಲಿಸಿದ ಶ್ರೀ ಆದಿನಾಥ ಶ್ವೇತಾಂಬರ ಜೈನ ಸಂಘ ಜಾರ್ಖಂಡ್‌ನಲ್ಲಿರುವ ಸಮ್ಮೇದ್ ಶಿಖಿರ್ಜಿಯನ್ನು ಪ್ರವಾಸೋದ್ಯಮ ಪಟ್ಟಿಯಿಂದ ಕೈಬಿಡಬೇಕು ಎಂದು ಒತ್ತಾಯಿಸಿತು.
Published on

ಹೊಸಪೇಟೆ: ಜಾರ್ಖಂಡ್‌ನಲ್ಲಿರುವ ಜೈನರ ತೀರ್ಥ ಕ್ಷೇತ್ರ ಸಮ್ಮೇದ್ ಶಿಖಿರ್ಜಿಯನ್ನು ಪ್ರವಾಸೋದ್ಯಮ ಪಟ್ಟಿಯಿಂದ ಕೈಬಿಡಬೇಕು ಎಂದು ಒತ್ತಾಯಿಸಿ ಶ್ರೀ ಆದಿನಾಥ ಶ್ವೇತಾಂಬರ ಜೈನ ಸಂಘದಿಂದ ನಗರದಲ್ಲಿ ಬೈಕ್ ರ‌್ಯಾಲಿ ನಡೆಸಲಾಯಿತು.

ಇಲ್ಲಿನ ಜೈನ ಧರ್ಮಶಾಲೆಯಿಂದ ಪಾದಗಟ್ಟೆ ಆಂಜನೇಯ ದೇವಸ್ಥಾನ, ಮದಕರಿ ನಾಯಕ ವೃತ್ತ, ವಾಲ್ಮೀಕಿ ವೃತ್ತ, ಮಾರ್ಕಂಡೇಯ ದೇವಾಲಯ ಹಾಗೂ 100 ಬೆಡ್ ಆಸ್ಪತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬೈಕ್ ರ‌್ಯಾಲಿ ನಡೆಸಿ, ಡಿಸಿಗೆ ಮನವಿ ಸಲ್ಲಿಸಿದರು.

ಸಮ್ಮೇದ್ ಶಿಖಿರ್ಜಿ ಜೈನ ಸಮುದಾಯದ ಧಾರ್ಮಿಕ ಕ್ಷೇತ್ರವಾಗಿದೆ. 24 ತೀರ್ಥಂಕರರು, ಅನೇಕ ಭವ್ಯ ಆತ್ಮಗಳು ಮೋಕ್ಷ ಹೊಂದಿರುವ ಪವಿತ್ರ ಸ್ಥಳವಿದು. ಇದನ್ನು ಪ್ರವಾಸೋದ್ಯಮ ಪಟ್ಟಿಗೆ ಸೇರ್ಪಡೆಗೊಳಿಸಿರುವುದು ಸರಿಯಲ್ಲ. ಪ್ರವಾಸಿತಾಣಕ್ಕೆ ಭೇಟಿ ನೀಡುವ ಪ್ರವಾಸಿಗರು ಮಾಂಸ ಸೇವನೆ, ಮಧ್ಯಪಾನ ಮತ್ತಿತರ ಅನೈತಿಕ ಚಟುವಟಿಕೆಗಳಲ್ಲಿ ತೊಡಗುವುದರಿಂದ ಜೈನ ಸಮುದಾಯದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಆತಂಕವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net