ತಂಬಾಕು ಮುಕ್ತ ಕಾರ್ಯಾಚರಣೆ 22 ಪ್ರಕರಣ

Published on

ಹೊಸಪೇಟೆ: ತಂಬಾಕು ಮುಕ್ತ ಯುವ ಅಭಿಯಾನ 2.0 ಅಡಿಯಲ್ಲಿ ಮಂಗಳವಾರ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕಾರ್ಯಚರಣೆ ನಡೆಸಿ ಪ್ರಕರಣ ದಾಖಲಿಸಿದರು.

ಚಿತ್ತವಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಕೈಗೊಂಡು ಕೋಪ್ಟ ಕಾಯ್ದೆ 2003ರ ಉಲ್ಲಂಘನೆ ಮಾಡಿದವರ ವಿರುದ್ಧ 10 ಪ್ರಕರಣ ದಾಖಲಿಸಿ 1900 ರೂ. ದಂಡ, 6 ಕಾಯ್ದೆಯ ಅಡಿ 2 ಪ್ರಕರಣ ದಾಖಲಿಸಿ 400 ರೂ. ದಂಡ ಹಾಕಲಾಗಿದೆ. ಸೆಕ್ಷನ್ 6ಬಿ ಕಾಯ್ದೆಯ ಅಡಿ 4 ಪ್ರಕರಣ ದಾಖಲಿಸಿ 800 ರೂ. ದಂಡ ಹಾಗೂ ಸೆಕ್ಷನ್ 4 ರ ಅಡಿ 06 ಪ್ರಕರಣ ದಾಖಲಿಸಿ 900 ದಂಡ ಸೇರಿದಂತೆ ಒಟ್ಟು 22 ಪ್ರಕರಣ ದಾಖಲಿಸಿ 4 ಸಾವಿರ ರೂಪಾಯಿ ದಂಡ ವಿಧಿಸಲಾಯಿತು.

ಕಾರ್ಯಾಚರಣೆಯಲ್ಲಿ ಪೊಲೀಸ್ ಇಲಾಖೆಯ ಎಎಸ್‌ಐ ಚೌಡಪ್ಪ, ಸಿಪಿಸಿ ನಾಗರಾಜ ನಾಯಕ್, ಸಂತೋಷ್, ಆರೋಗ್ಯ ಇಲಾಖೆ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಭೋಜರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net