ಸಂಬಳ, ಪಿಂಚಣಿ ವಿಳಂಬ ಆದಿರಲಿ

29 MANJU 03
Published on

ಹೊಸಪೇಟೆ: ಸಂಬಳ ಮತ್ತು ಪಿಂಚಣಿ ವಿಳಂಬವಾಗಿದ್ದು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಟಿ.ಬಿ.ಬೋರ್ಡ್ ವರ್ಕ್ ಚಾರ್ಜ್ ನೌಕರರ ಸಂಘದಿAದ ನಗರದ ತುಂಗಭದ್ರಾ ಮಂಡಳಿಯ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಕಾರ್ಯದರ್ಶಿ ಜಿ.ಟಿ.ಗೋಪಾಲ ಕೃಷ್ಣ ಮಾತನಾಡಿ, ಒಟ್ಟು 165 ನೌಕರರಿಗೆ ವೇತನ ಬಾಕಿ ಉಳಿದಿಯಿದೆ. ಕಳೆದ ಕೆಲ ತಿಂಗಳಿAದ ನೌಕರರಿಗೆ ವಿಳಂಬವಾಗಿ ವೇತನ ನೀಡುತ್ತಿದೆ. ಈ ಕುರಿತು ಅಧಿ ಕಾರಿಗಳನ್ನು ಕೇಳಿದರೆ ಸ್ಪಷ್ಟವಾದ ಉತ್ತರ ನೀಡುತ್ತಿಲ್ಲ. ವೇತನ ನೀಡದ ಹಿನ್ನೆಲೆಯಲ್ಲಿ ಹಲವಾರು ಸಮಸ್ಯೆಗಳು ಎದುರಾಗಿವೆ. ದೈನಂದಿನ ಜೀವನಕ್ಕೆ ತೊಂದರೆ ಉಂಟಾಗಿದೆ. ಹಲವು ಬಾರಿ ಮನವಿ ಮಾಡಿದರೂ, ಸ್ಪಂದಿಸದ ಹಿನ್ನೆಲೆಯಲ್ಲಿ ಸಂಕಷ್ಟ ಎದುರಿಸುವಂತಾಗಿದೆ ಎಂದರು.

ಕಾರಣ ಏನೆಂದು ಗೊತ್ತಾಗಿಲ್ಲ. ಮಂಡಳಿ ವ್ಯಾಪ್ತಿಯಲ್ಲಿ ಆದೋನಿಯವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದು, ಕೃಷಿ ಕ್ಷೇತ್ರಕ್ಕೆ ನೀರೊದಗಿಸಲು ಕಾಲುವೆಗಳ ನಿರ್ವಹಣೆ ಮತ್ತು ನೀರಿನ ವ್ಯವಸ್ಥೆಗಳ ನಿರ್ವಹಣೆಗೆ ನಮ್ಮ ಕೆಲಸ ಅತ್ಯಗತ್ಯವಾಗಿದೆ. ಈ ಸವಾಲುಗಳ ಹೊರತಾಗಿಯೂ ನಮ್ಮ ಸಿಬ್ಬಂದಿ ಸಮರ್ಪಣಾ ಮನೋಭಾವದಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೂ ಪ್ರಯಾಣ ಭತ್ಯೆ ಮರುಪಾವತಿ ನೀಡಿಲ್ಲ ಎಂದರು.

ಡ್ಯಾA ನಿರ್ವಹಣೆ, ಪ್ರವಾಹ ಬಂದಾಗ, ಗೇಟ್ ದುರಸ್ತಿ ಸಂದರ್ಭ ಸೇರಿ ಹಲವಾರು ಕ್ಲಿಷ್ಟಕರ ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಆದರೆ, ಈ ವರೆಗೆ ನಮ್ಮ ಸಂಬಳ ವಿಳಂಬವಾಗಲು ಕಾರಣ ಏನೆಂದು ಗೊತ್ತಾಗುತ್ತಿಲ್ಲ. ಕೂಡಲೇ ಆಂಧ್ರ ಮತ್ತು ಕರ್ನಾಟಕ ರಾಜ್ಯಗಳು ಪರಿಶೀಲಿಸಿ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net