

ಹೊಸಪೇಟೆ: ಮಲೆನಾಡಿನಲ್ಲಿ ಅಧಿಕ ಪ್ರಮಾಣದ ಮಳೆ ಆಗುತ್ತಿದ್ದು, ತ್ರಿವಳಿ ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಜೀವಕಳೆ ಬಂದಿದೆ. ಪರಿಣಾಮ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣದಲ್ಲಿ ಮತ್ತಷ್ಟು ಹೆಚ್ಚಳವಾಗಿದೆ.
ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಸೇರಿ ಜಲಾನಯನ ಪ್ರದೇಶದಲ್ಲಿ ಕೆಲದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕಳೆದ ನಾಲೈದು ದಿನದಲ್ಲಿ ಆರು ಟಿಎಂಸಿಗೂ ಅಧಿಕ ನೀರು ಜಲಾಶಯಕ್ಕೆ ಹರಿದು ಬಂದಿದೆ. ಸದ್ಯ 19201 ಕ್ಯೂಸೆಕ್ ಒಳಹರಿವು ಬರುತ್ತಿದ್ದು ಬತ್ತಿ ಬರಡಾಗಿದ್ದ ತುಂಗಭದ್ರಾ ಜಲಾಶಯಕ್ಕೆ ಮತ್ತೆ ಮರುಜೀವ ಬಂದAತಾಗಿದೆ.
ರಾಜ್ಯದಲ್ಲಿ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗಿದೆ. ಈ ಬಾರಿ ಕಳೆದ ಜು.01 ರಂದು ಒಳಹರಿವು ಆರಂಭವಾಗಿತ್ತು. ಅಂದು ಜಲಾಶಯದಲ್ಲಿ 3.338 ಟಿಎಂಸಿ ಇದ್ದ ನೀರು ಕಳೆದ ಭಾನುವಟತ ಅಂದಾಜು 5.790 ಟಿಎಂಸಿಗೂ ಹೆಚ್ಚು ಬಂದಿತ್ತು. ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡುಬAದಿದೆ. ಭಾನುವಾರ 6308 ಕ್ಯೂಸೆಕ್ ಇದ್ದ ನೀರು ಸೋಮವಾರ 11 ಸಾವಿರ ಕ್ಯೂಸೆಕ್ ಕ್ಕೂ ಅಧಿಕ ಒಳಹರಿವು ದ್ವಿಗುಣಗೊಂಡಿತು. ಶುಕ್ರವಾರ 19201 ಕ್ಯೂಸೆಕ್ ಒಳಹರಿವಿದೆ. 1590 ಅಡಿಗೆ 11.714 ಟಿಎಂಸಿ ನೀರು ಸಂಗ್ರಹವಾಗಿದ್ದು ರೈತರಲ್ಲಿನ ಭರವಸೆಗೆ ಕಾರಣವಾಗಿದೆ.
ಶುಕ್ರವಾರ ದಾಖಲಾದಂತೆ ಜಲಾಶಯದ ನೀರಿನ ಗರಿಷ್ಠ 1633 ಅಡಿ ಪೈಕಿ 1590.80 ಅಡಿ ನೀರು ಸಂಗ್ರಹವಾಗಿದೆ. ಒಳಹರಿವು 19201 ಕ್ಯೂಸೆಕ್ ಇದ್ದು, 11.714 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ಬಾರಿ ಇದೇ ದಿನಕ್ಕೆ ಜಲಾಶಯದಲ್ಲಿ1576.69 ಅಡಿಗೆ 3.071 ಟಿಎಂಸಿನಷ್ಟಿತ್ತು. ಕಳೆದ ಬಾರಿಗೆ ನೋಡಿದರೆ ಅಂದಾಜು 8.643 ಟಿಎಂಸಿ ನೀರು ಹೆಚ್ಚಾಗಿದೆ. ಮಲೆನಾಡಿನಲ್ಲಿ ಇನಷ್ಟು ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಭಾರಿ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ ಎಂಬ ನಿರೀಕ್ಷೆ ರೈತರದ್ದಾಗಿದೆ.
ಜಲಾಶಯಕ್ಕೆ ಒಳ ಹೆಚ್ಚಿರುವುದರಿಂದ ವಿಜಯನಗರ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ರೈತರಲ್ಲಿ ಖುಷಿ ಹೆಚ್ಚಿದೆ. ಈ ಭಾರಿ ತುಂಗಭದ್ರಾ ಜಲಾಶಯ ಭರ್ತಿಯಾದಲ್ಲಿ ಎರಡು ಬೆಳೆಗಳಿಗೆ ಸಮರ್ಪಕವಾಗಿ ನೀರು ಸಿಗುಬಹುದು ಎಂಬ ಭರವಸೆ ಮೂಡಿದೆ.
ಜಲಾಶಯದಲ್ಲಿ ಒಳ ಹರಿವು ಮತ್ತೆ ಆರಂಭವಾಗಿರುವುದು ಸಂತಸ ತಂದಿದೆ. ಸದ್ಯ ಮುಂಗಾರು ಉತ್ತಮವಾಗಿ ಕೆಲದಿನಗಳಿಂದ ಮಳೆ ಕೈ ಕೊಟ್ಟಿತ್ತು. ಸದ್ಯ ಉತ್ತಮ ಮಳೆಯಾಗುತ್ತಿರುವುದರಿಂದ ಡ್ಯಾಂ ಭರ್ತಿಯಾಗುವ ಭರವಸೆಯಿದೆ. ಸಿ.ಎ.ಗಾಳೆಪ್ಪ, ರೈತ ಮುಖಂಡ, ಹೊಸಪೇಟೆ