ಟಿಬಿಡ್ಯಾಂಗೆ ಸಿಎಸ್ ಐಆರ್ ತಜ್ಞರ ತಂಡ ಬೇಟಿ

21 MANJU 03
Published on

ಹೊಸಪೇಟೆ: ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್ ಗಳನ್ನು ಎನ್‌ಡಿಟಿ ಪರೀಕ್ಷೆ ನಡೆಸಲು ಚೆನ್ನೈ ನ ಸ್ಟ್ರಕ್ಚರಲ್ ಇಂಜಿನಿಯರಿಂಗ್ ರಿಸರ್ಚ್ ಸೆಂಟರ್ ನ (ಸಿಎಸ್ ಐಆರ್) ಪರಿಣತರ ತಂಡ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಲಾಶಯದ 33 ಗೇಟ್ ಗಳನ್ನು ಬದಲಿಸಿ, ಹೊಸ ಗೇಟ್ ಅಳವಡಿಕೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಟಿಬಿಡ್ಯಾಂಗೆ ಭೇಟಿ ನೀಡಿದ ರಾಷ್ಟ್ರೀಯ ಜಲಾಶಯ ಸುರಕ್ಷತಾ ಪ್ರಾಧಿಕಾರ ಅಧ್ಯಕ್ಷ ಅನಿಲ್ ಜೈನ್ ನೇತೃತ್ವದಲ್ಲಿ ತಂಡದ ಸಲಹೆಯಂತೆ ಜಲಾಶಯದ ಗಟ್ಟಿತನ ಪರೀಕ್ಷಿಸಲು ನಾನ್ ಡಿಸ್ಟ್ರಕ್ಟಿವ್ ಟೆಸ್ಟಿಂಗ್ (ಎನ್‌ಡಿಟಿ)ಗಾಗಿ ತಮಿಳುನಾಡಿನ ಸಿಎಸ್ ಐಆರ್ ನ ಪ್ರಧಾನ ವಿಜ್ಞಾನಿ ಡಾ.ಎಚ್.ಎನ್.ಬಾರ್ ನೇತೃತ್ವದಲ್ಲಿ ಐದು ಜನರ ತಂಡ ಶುಕ್ರವಾರ ರಾತ್ರಿ ಜಲಾಶಯಕ್ಕೆ ಭೇಟಿ‌ ನೀಡಿ, ಶನಿವಾರ ದಿನವಿಡಿ ಜಲಾಶಯದ ನಾಲ್ಕೈದು ಕ್ರಸ್ಟ್‌ ಗೇಟ್ ಗಳನ್ನು ಪರಿಶೀಲನೆ ನಡೆಸಿದರು.

ಶನಿವಾರ ಸಂಜೆ ವರೆಗೆ ಜಲಾಶಯದ ನಾಲ್ಕೈದು ಕ್ರಸ್ಟ್‌ ಗೇಟ್ ಗಳನ್ನು ಪರಿಶೀಲನೆ ಮಾಡಿದ ಪರಿಣಿತರ ತಂಡ, ಕೆಲ ದಿನಗಳಲ್ಲಿ ಪರೀಕ್ಷೆ ನಡೆಸಲು ಹಾಗೂ ಅದಕ್ಕೆ ಭರಿಸುವ ವೆಚ್ಚದ ವರದಿಯನ್ನು ಟಿಬಿಬಿ ಆಡಳಿತ ಮಂಡಳಿಗೆ ನೀಡಲಿದೆ. ಆ ಬಳಿಕವೇ ಜಲಾಶಯದ ಗೇಟ್‌ಗಳನ್ನು ಬದಲಿಸುವುದರ ಬಗ್ಗೆ ತುಂಗಭದ್ರಾ ಮಂಡಳಿ ಮುಂದಾಗಲಿದೆ ಎಂದು ಮೂಲಗಳು ತಿಳಿಸಿವೆ.

ಟಿಬಿಡ್ಯಾಂ ಕಾರ್ಯದರ್ಶಿ ಓಆರ್‌ಕೆ ರೆಡ್ಡಿ, ಡ್ಯಾಮ್ ನ ಸ್ಥಾನಿಕಾಧಿಕಾರಿ ರವಿಚಂದ್ರ, ರಾಘವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net