

ಹೊಸಪೇಟೆ, ದರೋಜಿ, ಗೂಬೆ, ಪತ್ತೆ, Hospet, thief, owl, found,
ಹೊಸಪೇಟೆ: ತಾಲೂಕಿನ ದರೋಜಿ ಕರಡಿಧಾಮದ ಬಳಿ ಇದೇ ಮೊದಲ ಬಾರಿಗೆ ಭಾರತೀಯ ಸ್ಕಾಪ್ಸ್ ಗೂಬೆ ಎಂಬ ವಿಶಿಷ್ಟ ನಿಶಾಚರಿ ಪತ್ತೆಯಾಗಿದ್ದು, ಛದ್ಮವೇಷಧಾರಿಯಾದ ಈ ಗೂಬೆಯನ್ನು ಅದರ ವಿಶಿಷ್ಟ ಸದ್ದಿನಿಂದ ಪಕ್ಷಿ ಪ್ರೇಮಿಗಳು ಗುರುತಿಸಿದ್ದಾರೆ. ಈ ಭಾಗದಲ್ಲಿ ಈ ಪ್ರಭೇದದ ಗೋಚರತೆ ಅಚ್ಚರಿಗೆ ಕಾರಣವಾಗಿದೆ.
ವಿಶಿಷ್ಟ ಕಿವಿಯಂತಹ ಗರಿ, ಛದ್ಮವೇಷಧಾರಿಯಾದ ನಿಶಾಚರಿ ಭಾರತೀಯ ಸ್ಕಾಪ್ಸ್ ಗೂಬೆ ಈ ಭಾಗದಲ್ಲಿ ಇದೇ ಮೊದಲ ಬಾರಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ಗೂಬೆಯು, ಗಾತ್ರದಲ್ಲಿ ಚಿಕ್ಕದಾಗಿದ್ದು, 9 ರಿಂದ 10 ಇಂಚು ಉದ್ದವಿರುವ ಈ ಗೂಬೆಯೂ ಬೂದು ಬಣ್ಣದ್ದಾಗಿದೆ. ಕಣ್ಣು ಕಡು ಬಣ್ಣವಿದೆ. ದೇಹದ ಬಣ್ಣ ಸುತ್ತಲಿನ ಪರಿಸರಕ್ಕೆ ಹೊಂದಿಕೊಳ್ಳುವುದರಿAದ ಹಗಲಿನಲ್ಲಿ ಇದನ್ನು ಪತ್ತೆ ಹಚ್ಚುವುದು ಕಷ್ಟ. ಸ್ಕಾಪ್ಸ್ ಗೂಬೆ ವಟ ವಟ ಸದ್ದಿನಿಂದ ಹಿಂಬಾಲಿಸಿದ ಪಕ್ಷಿ ಪ್ರೇಮಿಗಳಾದ ಸಾಚಿರಾಯ್ ಮತ್ತು ಶ್ರೀಧರ್, ಪೆರುಮಾಳ್, ಪಂಪಯ್ಯ ಸ್ವಾಮಿ ಗುರುತಿಸಿದ್ದಾರೆ. ಈ ಪ್ರಬೇಧವೇ ಈ ಭಾಗದಲ್ಲಿ ಹೊಸದಾಗಿ ಗೋಚರಿಸಿರುವುದು ಅಚ್ಚರಿ ಸಂಗತಿಯಾಗಿದೆ.
ಗೂಬೆಯನ್ನು ಲಕ್ಷ್ಮೀದೇವಿಯ ವಾಹನ ಎಂದು ಪರಿಗಣಿಸಲಾಗುತ್ತದೆ. ತೀಕ್ಷಣ ದೃಷ್ಟಿ ಹೊಂದಿರುವ ಕಾರಣ ಲಕ್ಷಿö್ಮÃ ದೇವಿ ಗೂಬೆಯನ್ನು ತನ್ನ ವಾಹನವನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾಳೆ. ಗೂಬೆ ದರ್ಶನವು ಆರ್ಥಿಕ ಅಭಿವೃದ್ಧಿ ಮತ್ತು ಧನಾತ್ಮಕ ಶಕ್ತಿ ಪ್ರವಾಹ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಜನರು ಮನೆ, ಕೆಲಸ ಮಾಡುವ ಸ್ಥಳಗಳಲ್ಲಿ ಗೂಬೆ ಫೋಟೋ ಇರಿಸಿಕೊಳ್ಳುತ್ತಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿಯೇ ವಿಶೇಷ ಗೂಬೆ ಈಭಾಗದಲ್ಲಿ ಪತ್ತೆಯಾಗಿದ್ದು, ಹಲವು ಚರ್ಚೆಗಳಿಗೆ ಕಾರಣವಾಗಿದೆ.
20 ಮಂಜು 01
ಹೊಸಪೇಟೆ ತಾಲೂಕಿನ ದರೋಜಿ ಕರಡಿಧಾಮದ ಬಳಿ ಕಾಣಿಸಿದ ವಿಶೇಷ ಸ್ಕಾಪ್ಸ್ ಗೂಬೆ.
=========