ಮಾನವೀಯತೆಯ ವಿರುದ್ಧ ಉಗ್ರರ ದಾಳಿ

25 MANJU 02
Published on

ಹೊಸಪೇಟೆ: ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಖಂಡಿಸಿ ಖಂಡಿಸಿ ವಕೀಲರ ಸಂಘದಿAದ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಭಯಾನಕ ಭಯೋತ್ಪಾಕರ ದಾಳಿ ದೇಶದ ಜನತೆಯನ್ನು ತಲ್ಲಣಗೊಳಿಸಿದೆ. ಈ ಹೃದಯವಿದ್ರಾವಕ ದಾಳಿಯಲ್ಲಿ ಹಲವು ನಾಗರಿಕರು ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಮಾನವೀಯತೆಯ ವಿರುದ್ಧ ನಡೆದ ಕ್ರೂರ ಕೃತ್ಯವಾಗಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿ ಸಂಕೇತವಾಗಿ ಮೃತರಿಗೆ ಮೌನಾಚರಣೆಯಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು.

ದೃಷ್ಟಕೃತ್ಯಕ್ಕೆ ಕಾರಣರಾದ ತೀವ್ರವಾದಿ ಉಗ್ರಗ್ರಾಮಿಗಳನ್ನು ತಕ್ಷಣಕ್ಕೆ ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಯಾವುದೇ ರಾಜಕೀಯ ಬೆರೆಸದೇ ಸರ್ಕಾರ ಕೈಗೊಂಡ ನಿರ್ಣಯವನ್ನು ಎಲ್ಲವನ್ನು ಒಪ್ಪಿಕೊಳ್ಳಬೇಕು. ಉಗ್ರರ ಕೃತ್ಯವನ್ನು ಸಂಘ ಖಂಡಿಸಲಿದೆ ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಪ್ರಹ್ಲಾದ, ವಕೀಲರಾದ ವೀರಭದ್ರಪ್ಪ, ಮಂಜುನಾಥ, ಕರುಣಾನಿಧಿ, ಸೌದಾಗರ್, ದಯಾನಂದ, ಮಹೇಶ್, ಶ್ರೀನಿವಾ ಮೂರ್ತಿ, ಮರಿಯಪ್ಪ, ರವಿಕುಮಾರ್, ಕಡ್ಲೆಬಾಳ ಮೋಹನ್, ಚನ್ನಬಸಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net