

ಹೊಸಪೇಟೆ : ನಗರದ ಹೊರವಲಯದ ಐತಿಹಾಸಿ ಶ್ರೀ ಜಂಬುನಾಥ ದೇಗುಲದ ಆವರಣದಲ್ಲಿ ಕೆಲ ದಿನಗಳಿಂದ ಕರಡಿಯೊಂದು ಕಾಣಿಸಿಕೊಳ್ಳುತ್ತಿದ್ದು ಅರ್ಚಕರು, ಭಕ್ತರು ಆತಂಕಗೊAಡಿದ್ದಾರೆ.
ನಾಲೈದರಿಂದ ಆರು ಕರಡಿಗಳು ರಾತ್ರಿ ವೇಳೆ ದೇಗುಲದ ಬಳಿ ಬರುತ್ತಿದೆ. ಗಲಾಟೆ ಮಾಡಿದ್ದರಿಂದ ಓಡಿಸಲಾಗುತ್ತಿದೆ. ದೇಗುಲದ ಬಾವಿ ವರೆಗೆ ಹೋಗಿಬರುತ್ತಿದೆ. ನಾವೆಲ್ಲ ಬಹಳ ಆತಂಕಗೊAಡಿದ್ದೇವೆ. ಈ ಬಗ್ಗೆ ಅರಣ್ಯ ಇಲಾಖೆ ದೂರು ನೀಡಿದರು ಪ್ರಯೋಜವಿಲ್ಲ ಎಂದು ಅರ್ಚಕ ಆನಂದಸ್ವಾಮಿ ತಿಳಿಸಿದರು.