ತಹಸಿಲ್ ಕಚೇರಿಗೆ ಲೋಕಾ ಭೇಟಿ

23 MANJU 05
Published on

ಹೊಸಪೇಟೆ: ಸರ್ಕಾರಿ ಜಾಗದ ಕುರಿತ ಪ್ರಕರಣದ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸಚಿನ್ ಛಲವಾದಿ ನೇತೃತ್ವದ ತಂಡ ಇಲ್ಲಿನ ತಹಸೀಲ್ದಾರ ಕಚೇರಿಗೆ ಭೇಟಿ ನೀಡಿ ಕೆಲ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಸರ್ಕಾರಿ ಜಾಗದ ಕುರಿತು ಲೋಕಾಯುಕ್ತಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ ಕಚೇರಿಗೆ ಭೇಟಿ ನೀಡಿ, ಕೆಲ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ತಹಸೀಲ್ದಾರ ಶೃತಿ ಅವರಿಂದಲೂ ಕೆಲ ಮಾಹಿತಿ ಪಡೆದಿದ್ದಾರೆ. ಲೋಕಾಯುಕ್ತ ಇನ್ಸ್ ಪೆಕ್ಟರ್‌ಗಳಾದ ಅಮರೇಶ್ ಹುಬ್ಬಳ್ಳಿ, ರಾಜೇಶ್ ಲಮಾಣಿ ಮತ್ತು ಸಿಬ್ಬಂದಿ ದಾಳಿ ವೇಳೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net