ಭೀಮಾ ಸಿನಿಮಕ್ಕಾಗಿ ಅಭಿಮಾನಿಗಳ ಕೀಟಲೆ

news
ಹೊಸಪೇಟೆಯಲ್ಲಿ ದುನಿಯಾ ವಿಜಯ್ ನಟನೆಯ ಭೀಮಾ ಸಿನಿಮಾ ಬೆಳಗಾ ಮುಂಜಾನೆ ಪ್ರದರ್ಶನವಾಗಿಲ್ಲ ಎಂದು ಚಿತ್ರಮಂದಿರದ ಗೇಟ್ ಹತ್ತಿ ದಾಂಧಲೆ ಮಾಡಿದ ಅಭಿಮಾನಿಗಳು.
Published on

ಹೊಸಪೇಟೆ: ದುನಿಯಾ ವಿಜಯ್ ನಟನೆಯ ಭೀಮಾ ಸಿನಿಮಾ ಬೆಳಗಾ ಮುಂಜಾನೆ ಪ್ರದರ್ಶನವಾಗಿಲ್ಲ ಎಂದು ಚಿತ್ರಮಂದಿರದ ಮುಂದೆ ಅಭಿಮಾನಿಗಳಿಂದ ಗಲಾಟೆಯಾದ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ.

ರಾಜ್ಯಾದ್ಯಂತ ದುನಿಯಾ ವಿಜಯ್ ನಟನೆಯ ಭೀಮ ಸಿನಿಮಾ ಶುಕ್ರವಾರ ತೆರೆಕಂಡಿದೆ. ನಗರದಲ್ಲಿ ಕೂಡ ಸರಸ್ವತಿ ಚಿತ್ರಮಂದಿರದಲ್ಲಿ ಸಿನಿಮ ತೆರೆಕಂಡಿದೆ. 6 ಗಂಟೆಗೆ ಮೊದಲ ಪ್ರದರ್ಶನ ಆಗಬೇಕಿತ್ತು. ಆದರೆ, 7 ಗಂಟೆ ನಂತರ ಪ್ರದರ್ಶನವಾಗಿದೆ. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಪರಭಾಷೆ ಚಿತ್ರಗಳು ಬೆಳಗಾಮುಂಜಾನೆ ಪ್ರದರ್ಶನ ಮಾಡುತ್ತಿರಿ. ಕನ್ನಡ ಸಿನಿಮಗಳಿಗೆ ಯಾಕೆ ತಡಮಾಡುತ್ತಿರಿ ಎಂದು ಅಭಿಮಾನಿಗಳು ಚಿತ್ರಮಂದಿರದ ಗೇಟ್ ಹಾಗೂ ಬೀಗ ಮುರಿದ ಒಳಗೆ ನುಗ್ಗಲು ಪ್ರಯತ್ನ ಮಾಡಿದ್ದಾರೆ.

ನಗರ ಸೇರಿದಂತೆ ವಿವಿಧ ಕಡೆಯಿಂದ ಬೆಳಗ್ಗೆ 4 ಗಂಟಡೆಯಿAದಲೇ ಅಭಿಮಾನಿಗಳು ಚಿತ್ರ ಚಿತ್ರಮಂದಿರದ ಮುಂದೆ ಜಮಾಯಿಸಿದ್ದಾರೆ. 6 ಗಂಟೆಗೆ ಪ್ರದರ್ಶನ ಮಾಡುವಂತೆ ಒತ್ತಾಯಿಸಿದ್ದಾರೆ. ಗಲಾಟೆ ನಡೆದ. ಬಳಿಕ 7 ಗಂಟೆಗೆ ಸಿನಿಮಾ ಮೊಲದ ಪ್ರದರ್ಶನ ಕಂಡಿದೇ. ಬೇರೆ ಬೇರೆ ಗ್ರಾಮಗಳಿಂದ ಅಭಿಮಾನಿಗಳು ಮೊದಲ ಶೋ ವೀಕ್ಷಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net