ಮಕ್ಕಳಿಗೆ ಪ್ರಾಥಮಿಕ ನೀಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯ

news
ಹೊಸಪೇಟೆ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಗುರುಸ್ಪಂದನಾ ಕಾರ್ಯಕ್ರಮ ಬಿಇಒ ಎಂ.ಚನ್ನಬಸಪ್ಪ ಉದ್ಘಾಟಿಸಿದರು.
Published on

ಹೊಸಪೇಟೆ: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ ಎಂದರು ಬಿಇಒ ಎಂ.ಚನ್ನಬಸಪ್ಪ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿAದ ನಗರದ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಗುರುಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿರು.

ಮಕ್ಕಳಲ್ಲಿ ಜ್ಞಾನ ಶಿಸ್ತು, ನೀತಿ, ಮೌಲ್ಯಗಳನ್ನ ಬಿತ್ತಿ ಸತ್ಪçಜೆಗಳನ್ನಾಗಿ ರೂಪಿಸುವ ಮಹತ್ತರ ಜವಾಬ್ದಾರಿಯನ್ನು ಹೊಂದಿರುವ ಶಿಕ್ಷಕರಿಗೆ ತಮ್ಮ ಸೇವಾ ಪುಸ್ತಕವನ್ನ ಪರಿಶೀಲಿಸಲು ಗುರುಸ್ಪಂದನಾ ಕಾರ್ಯಕ್ರಮ ಸಹಕಾರಿಯಾಗಿದೆ. ಶಿಕ್ಷಕರು ತಮ್ಮ ಸೇವಾ ಪುಸ್ತಕವನ್ನ ಪರಿಶೀಲಿಸಿ ಏನಾದರೂ ತಿದ್ದುಪಡಿ ಇದ್ದಲ್ಲಿ ತಕ್ಷಣ ಕಾರ್ಯ ನಿರ್ವಾಹಕರಿಂದ ದಾಖಲಿಸಿ ನಮ್ಮ ಸಹಿ ಪಡೆಯಬೇಕು ಎಂದರು.

ಶಿಕ್ಷಕರ ಸಂಘದ ಅಧ್ಯಕ್ಷ ಕೆಬಸವರಾಜ್ ಮಾತನಾಡಿ, ಶಿಕ್ಷಕರು ಸೇವಾ ಪುಸ್ತಕದಲ್ಲಿ ತಮ್ಮ ಸೇವಾ ವಿವರ, ಗಳಿಕೆ ರಜೆ, ವಿದ್ಯಾರ್ಹತೆ, ಕಾಲಮಿತಿ ಹಾಗೂ ವಾರ್ಷಿಕ ಬಡ್ತಿಗಳು ಮುಂತಾದವುಗಳ ವಿವರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಿಯೊಂದಿಗೆ ದಾಖಲಾಗಿರುವುದನ್ನ ಖಚಿತಪಡಿಸಿಕೊಳ್ಳಬೇಕು. ಯಾವುದಾದರೂ ವಿವರ ದಾಖಲಾಗದಿದ್ದಲ್ಲಿ ತಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದು ಸೇವಾ ಪುಸ್ತಕದಲ್ಲಿ ದಾಖಲಿಸಲು ಅಗತ್ಯ ದಾಖಲೆ ಒದಗಿಸಬೇಕು ಎಂದರು.

ಕ್ಷೇತ್ರ ಸಮನ್ವಯ ಅಧಿಕಾರಿ ಶಿವಕುಮಾರ್, ಸಂಘದ ಕಾರ್ಯದರ್ಶಿ ಮಲ್ಲಯ್ಯ, ಪತ್ರಾಂಕಿತ ವ್ಯವಸ್ಥಾಪಕ ವೆಂಕಟೇಶ್ ದೇಶಪಾಂಡೆ, ಪ್ರಮುಖರಾದ ಕೆ.ಮಾರ್ಗದಪ್ಪ, ಎಲ್.ವಿಜಯಕುಮಾರಿ, ಕಡ್ಲಿವೀರಭದ್ರೇಶ್, ಜಾಕೀರ್‌ಹುಸೇನ್, ಆರ್.ಸುಧಾದೇವಿ, ದ್ಯಾಮಾನಾಯ್ಕ್, ಬಸವನಗೌಡ, ನೀಲಮ್ಮ, ಗುರುಬಸವರಾಜ್, ಪ್ರಕಾಶ್, ಶ್ರೀಧರ್, ಜೀವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net