

ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ಅಂದಾಜು 1.70 ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ನದಿಗೆ ಹರಿಸಲಾಗುತ್ತಿದ್ದು, ಹಂಪಿಯ ನದಿ ತೀರದ ಬಹುತೇಕ ಸ್ಮಾರಕಗಳು ಮುಳುಗಡೆಯಾಗಿವೆ.
ಜಲಾಶಯಕ್ಕೆ 28 ಗೇಟ್ 4 ಅಡಿ, 5 ಗೇಟ್ ಒಂದೂವರೆ ಎತ್ತರಿಸಿ ನದಿಗೆ ಹಾಗೂ ಕಾಲೂವೆಗಳ ಮೂಲಕ 1.70 ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಹಂಪಿಯ ಕೋದಂಡ ರಾಮಸ್ವಾಮಿ ದೇಗುಲದ ಗರ್ಭಗುಡಿಯ ಮೆಟ್ಟಿಲ ವರೆಗೆ ಹಾಗೂ ಸೀತೆ ಸರಗು-ಸುಗ್ರಿವ ಗುಹೆ ಮೂಲಕ ನದಿ ನೀರು ರಭಸವಾಗಿ ಹರಿಯುತ್ತಿದೆ.
1633 ಅಡಿಯ ಜಲಾಶಯದಲ್ಲಿ 1630.92 ಅಡಿಗೆ 97.501 ಟಿಎಂಸಿ ನೀರು ಸಂಗ್ರಹವಾಗಿದೆ. 1.96 ಲಕ್ಷ ಕ್ಯೂಸೆಕ್ ಒಳಹರಿವಿದೆ. 1.70 ಕ್ಯೂಸೆಕ್ ಗೂ ಅಧಿಕ ನೀರು ನದಿಗೆ ಹರಿಸಲಾಗಿದೆ. ನದಿ ಪಾತ್ರದ ಕೃಷಿ ಜಮೀನುಗಳಿಗೆ ನೀರು ನುಗ್ಗಿ ಹಾನಿಯಾಗಿವೆ.