

ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಭಾನುವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ ಭೇಟಿ ನೀಡಿ ಪರಿಶೀಲಿಸಿದರು.
ಕೊಪ್ಪಳ ಜಿಲ್ಲೆಯ ಕುಕನೂರು ಪ್ರವಾಸ ಕೈಗೊಂಡಿದ್ದ ಸಚಿವರು, ಡ್ಯಾಂನ ವೈಕುಂಠದಲ್ಲಿ ತಂಗಿದ್ದರು. ನಂತರ ಟಿಬಿ ಡ್ಯಾಂ 19ನೇ ಕ್ರಸ್ಟ್ ಗೇಟ್ ಗೆ ಬಳಿ ಭೇಟಿ ನೀಡಿ ಪರಿಶೀಲಿಸಿದರು. ಸ್ಟಾಪ್ ಲಾಗ್ ಅಳವಡಿಸಿರೋ ಸ್ಥಳದ ಸುರಕ್ಷತೆಯ ಮಾಹಿತಿ ಪಡೆದರು. ಶನಿವಾರ ಬಂದಿದ್ದ ಹೊಸ ಗೇಟ್ ಗುಣಮಟ್ಟ ಹಾಗೂ ಸುರಕ್ಷತೆ ಕಾಪಾಡುವುದು ಅನಿವಾರ್ಯವಾಗಿದೆ. ರೈತರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲು ಡ್ಯಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂಸದ ರಾಜಶೇಖರ್ ಹಿಟ್ನಾಳ್, ವಿಜಯನಗರ ಎಸ್ಪಿ ಬಿ.ಎಲ್.ಶ್ರೀಹರಿಬಾಬು ಇತರರಿದ್ದರು.