

ಹೊಸಪೇಟೆ: ನಾನು ಇಲ್ಲಿಯೇ ನೌಕರಿ ಮಾಡಿದ್ದೇನೆ. ತುಂಗಭದ್ರಾ ನದಿಯ ನೀರು ಕುಡಿದು ಬೆಳೆದಿದ್ದೇನೆ. ಈ ಭಾಗದ ಜನರ ಜೀವನಾಡಿಯಾದ ತುಂಗಭದ್ರಾ ಮಡಿಲಿನಿಂದ ನೀರು ವ್ಯರ್ಥವಾಗಿ ಹರಿಯುತ್ತಿರುವುದು ನೋಡಿ ಮರುಗುತ್ತಿದ್ದೇನೆ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳ ಜತೆ ಮಾತುಕತೆ ವೇಳೆ ಕಣ್ಣಯ್ಯ ನಾಯ್ಡು ಭಾವುಕರಾದರು.
ಬೇರೆ ಬೇರೆ ಜಲಾಯಶಯಗಳಿಗೆ ಯಾವುದೇ ರೀತಿಯ ಅವಘಡಗಳಿಗೆ ಅವಕಾಶವಿಲ್ಲದಂತೆ ತಮ್ಮ ಮಾರ್ಗದರ್ಶನದಲ್ಲಿ ಎಂಜಿನಿಯರಗಳ ತಂಡವು ಹೊಸ ಗೇಟ್ ಅಳವಡಿಸಿ ಯಶಸು ಕಂಡಿದ್ದಾರೆ ಎಂದರು.