

ಹೊಸಪೇಟೆ: ಟಿಬಿಡ್ಯಾಂ ಗೇಟ್ ಪ್ರಕರಣದ ಹಿನ್ನೆಲೆಯಲ್ಲಿ ಭೇಟಿ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಸುದ್ದಿಗಾಗಿ ಆಗಮಿಸಿದ ಪತ್ರಕರ್ತರು ನೆರಳಿನ ವ್ಯವಸ್ಥೆಯಿಲ್ಲದೇ ಶೇ.35 ಬಿಸಲಿನ ತಾಪಕ್ಕೆ ಬೆಂಡಾದರು. ನೆರಳಿನ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು.
ಕಳೆದ ನಾಲ್ಕು ದಿನಗಳಿಂದ ತುಂಗಭದ್ರಾ ಜಲಾಶಯದ ಗೇಟ್ ಪ್ರಕರಣದ ಸಮಗ್ರ ಸುದ್ದಿಗಳನ್ನು ಬಿತ್ತರಿಸುತ್ತಿರುವ ಪತ್ರಕರ್ತರು ಸಿಎಂ ಆಗಮನದ ಹಿನ್ನೆಲೆಯಲ್ಲಿ ಜಲಾಶಯದ ಮೇಲ್ಭಾಗದಲ್ಲಿ ಒಂದೆಡೆ ಪತ್ರಕರ್ತರಿಗೆ ವ್ಯವಸ್ಥೆ ಮಾಡಲಾಗಿತ್ತು. ಜಲಾಶಯದ 21ನೇ ಗೇಟ್ ಮುಂದೆ ಬ್ಯಾರಿಕೆಡ್ ಹಾಕಿ ನೆರಳಿನ ವ್ಯವಸ್ತೆ ಮಾಡಲಾಗಿತ್ತು. ಅಲ್ಲಿ ಕೇವಲ ಪೊಲೀಸರು ಹಾಗೂ ಡ್ಯಾಂ ಸಿಬ್ಬಂದಿಗಳಿಗೆ ವ್ಯವಸ್ಥೆ ಮಾಡಲಾಗಿತ್ತು. 22ನೇ ಗೇಟ್ ಮುಂದೆ ಪತ್ರಕರ್ತರಿಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ನೆರಳಿನ ವ್ಯವಸ್ಥೆ ಮಾಡದೇ ಇರುವುದರಿಂದ ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಬಿಸಲು ಹೆಚ್ಚಿದೆ ನಾವು ನೆರಳಿಗೆ ಬರುತ್ತವೆ ಅಥವ, ನೆರಳಿನ ವ್ಯವಸ್ಥೆ ಮಾಡಿಕೊಡಿ ಎಂದರು ಅಧಿಕಾರಿಗಳು ಅನುವು ಮಾಡಲಿಲ್ಲ. ನೀರು, ನೆರಳಿನ ವ್ಯವಸ್ಥೆಯಿಲ್ಲದೇ, ಬಿಸಲಿತ ತಾಪ ತಾಳಲಾರದೆ ಕುರ್ಚಿಗಳನ್ನೆ ತಲೆಯ ಮೇಲೆ ಹಾಕಿಕೊಂಡು ನಿಂತುಕೊಂಡರು. ಇನ್ನೂ ಕೆಲವರು ಅನಿರ್ವಾಯವಾಗಿ ಬಿಸಲಿನಲ್ಲೇ ಕಾಲ ಕಳೆದರು.